ಕಾವು: ಮಾಡ್ನೂರು ಗ್ರಾಮದ ಕಾವು ನಿಧಿಮುಂಡ ನಿವಾಸಿ, ನಿವೃತ್ತ ಮುಖ್ಯಗುರು, ಹಿರಿಯ ಕೃಷಿಕರೂ ಆಗಿದ್ದ ರಾಜಾರಾವ್ ಎನ್(ವ.80)ರವರು ವಯೋಸಹಜ ಖಾಯಿಲೆಯಿಂದ ಫೆ.5ರಂದು ಮುಂಜಾನೆ ನಿಧನರಾಗಿದ್ದಾರೆ.
ಮೃತರು ಪತ್ನಿ ವಿಶಾಲಾಕ್ಷಿ, ಪುತ್ರರಾದ ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಸತೀಶ್ ಎನ್ ರಾವ್, ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿ ರಮೇಶ್ ಎನ್ ರಾವ್, ಪುತ್ರಿ ಆಶಾ ಕುಮಾರಸ್ವಾಮಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.