ಪುತ್ತೂರು: ಫೆ. 12 ಹಾಗೂ 13ರಂದು ಕೈಪಂಗಳ ಬಾರಿಕೆಯಲ್ಲಿ ನಡೆಯಲಿರುವ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು.
ಆಡಳಿತ ಮೊಕ್ತೇಸರರಾದ ಮೋನಪ್ಪ ಕುಲಾಲ್ ಕೈಪಂಗಳ ಬಾರಿಕೆ, ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ವೇದನಾಥ ಸುವರ್ಣ, ಕೋಟಿ ಚೆನ್ನಯ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಪ್ರಭಾಕರ ಗೌಡ ಕೆದ್ಕಾರ್, ಕೋಶಾಧಿಕಾರಿ ಶುಭಕರ ಕುಲಾಲ್ ಕೈಪಂಗಳ ಬಾರಿಕೆ, ಯುವರಾಜ ಕೆದ್ಕಾರ್, ಮತ್ತು ವಿಹಾನ್ ಕೈಪಂಗಳ ಬಾರಿಕೆ ಉಪಸಿತರಿದ್ದರು.