ದಶಮಾನೋತ್ಸವದ ಸಂಭ್ರಮದಲ್ಲಿನ ಅವೆನ್ಯೂ ಕಂಪ್ಯೂಟರ‍್ಸ್ ನವೀಕರಣಗೊಂಡು ಶುಭಾರಂಭ

0

ಪ್ರಖ್ಯಾತ ಕಂಪೆನಿಗಳ ಕಂಪ್ಯೂಟರ‍್ಸ್, ಸಿಸಿ ಟಿವಿ ಮಾರಾಟ/ಸೇವಾ ಸಂಸ್ಥೆ

ಪುತ್ತೂರು: ಕಳೆದ ಒಂಭತ್ತು ವರ್ಷಗಳಿಂದ ದರ್ಬೆ ರಿಲಯನ್ಸ್ ಡಿಜಿಟಲ್ಸ್ ಎದುರುಗಡೆ ವ್ಯವಹರಿಸುತ್ತಿರುವ ವಿವಿಧ ಪ್ರಖ್ಯಾತ ಕಂಪೆನಿಗಳ ಲ್ಯಾಪ್‌ಟಾಪ್ಸ್, ಕಂಪ್ಯೂಟರ‍್ಸ್, ಸಿಸಿ ಟಿವಿ, ಕಂಪ್ಯೂಟರ್ ಬಿಡಿಭಾಗಗಳು, ಇನ್ಸೂರೆನ್ಸ್ ಪಾಲಿಸಿಗಳನ್ನೊಳಗೊಂಡ ಮಾರಾಟ ಹಾಗೂ ಸೇವಾ ಸಂಸ್ಥೆ ಅವೆನ್ಯೂ ಕಂಪ್ಯೂಟರ‍್ಸ್ ಇದೀಗ ದಶಮಾನೋತ್ಸವದ ಸಂಭ್ರಮವನ್ನು ಕಾಣುತ್ತಿದ್ದು ಸಂಸ್ಥೆಯು ಹೊಸ ಉತ್ಪನ್ನಗಳೊಂದಿಗೆ, ಹೊಸ ಆಶಯಗಳೊಂದಿಗೆ ನವೀಕರಣಗೊಂಡು ಮೇಲ್ದರ್ಜೆಗೇರಿದ್ದು, ಇದರ ಉದ್ಘಾಟನೆಯು ಫೆ.7 ರಂದು ನೆರವೇರಿತು.


ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುತ್ತಿದೆ-ಸತೀಶ್ ಕೆಡೆಂಜಿ:
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಓರ್ವ ಸಜ್ಜನ, ಪ್ರಾಮಾಣಿಕ ವ್ಯಕ್ತಿಯಾಗಿರುವ ಅನಿಲ್‌ರವರು ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಮಾರಾಟ ಮಾತ್ರ ಮುಖ್ಯವಲ್ಲ, ಪ್ರಮುಖವಾಗಿ ನಾವು ನೀಡುವ ಸೇವೆ ಬಹಳ ಮುಖ್ಯವಾಗಿರುತ್ತದೆ. ಇದೀಗ ಅವೆನ್ಯೂ ಕಂಪ್ಯೂಟರ್ಸ್ ಆಧುನೀಕರಣಗೊಂಡಿದ್ದು ಈ ಸಂಸ್ಥೆಯು ಉತ್ತರೋತ್ತರ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.


ಪ್ರೀತಿ, ವಿಶ್ವಾಸ, ನಗುಮುಖದ ಸೇವೆಯೊಂದಿಗೆ ಸಮಾಜಕ್ಕೆ ಕೊಡುಗೆ-ಪಂಜಿಗುಡ್ಡೆ ಈಶ್ವರ ಭಟ್:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ದೀಪ ಬೆಳಗಿಸಿ, ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿ, ಅವೆನ್ಯೂ ಕಂಪ್ಯೂಟರ್ಸ್ ಸಂಸ್ಥೆಯು ಪ್ರೀತಿ, ವಿಶ್ವಾಸ ಹಾಗೂ ನಗುಮುಖದ ಸೇವೆಯೊಂದಿಗೆ ಸಮಾಜಕ್ಕೆ ಒಂದು ಕೊಡುಗೆಯಾಗಿ ಸೇವೆ ನಿರ್ವಹಿಸುತ್ತಿದ್ದು ಇದು ಮುಂದಿನ ದಿನಗಳಲ್ಲಿ ಮುಂದುವರೆಯಲಿ. ನನ್ನ ಮನೆಗೂ ರೂ.3 ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಈಗಾಗಲೇ ಹೇಳಿದ್ದೇನೆ ಜೊತೆಗೆ ಮುಂದಿನ ದಿನಗಳಲ್ಲಿ ಬೆಳ್ಳಿಪ್ಪಾಡಿಯಲ್ಲಿ ನಿರ್ಮಾಣವಾಗಲಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೂ ಸಿಸಿ ಕ್ಯಾಮರಾಗಳ ಅಗತ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.


ಜನಮಾನಸದಲ್ಲಿ ನೆಲೆಯೂರಿ ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದುವಂತಾಗಲಿ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಉದ್ಯಮದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಶ್ರದ್ಧೆ ಇದ್ದಲ್ಲಿ ಯಾವುದೇ ಉದ್ಯಮವು ಎತ್ತರೇತ್ತರಕ್ಕೆ ಬೆಳೆಯುತ್ತದೆ. ಅನಿಲ್‌ರವರು ನಮ್ಮ ಊರಿನ ಹುಡುಗನಾಗಿದ್ದು ಅವರು ಸಮಾಜ ಸೇವೆಯೊಂದಿಗೆ ಉದ್ಯಮದಲ್ಲೂ ಎತ್ತರಕ್ಕೆ ಬೆಳೆದಿರುವುದು ಖುಶಿ ತಂದಿದೆ. ಈ ಅವೆನ್ಯೂ ಕಂಪ್ಯೂಟರ್ಸ್ ಸಂಸ್ಥೆಯು ತಮ್ಮ ಸೇವೆಯ ಮೂಲಕ ಜನಮಾನಸದಲ್ಲಿ ನೆಲೆಯೂರಿ ಜಿಲ್ಲೆಯಲ್ಲಿ ಅನೇಕ ಶಾಖೆಗಳನ್ನು ಹೊಂದುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ವ್ಯವಹಾರದಲ್ಲಿ ಸೈ, ಸ್ಪರ್ಧಾತ್ಮಕ ಯುಗದಲ್ಲಿ ನಂ.ವನ್-ಜಯಂತ್ ನಡುಬೈಲು:
ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಮಾತನಾಡಿ, ಅವೆನ್ಯೂ ಕಂಪ್ಯೂಟರ್ಸ್ ಮಾಲಕ ಅನಿಲ್‌ರವರು ತನಗೆ ತಮ್ಮನಾದ್ರೂ ಒಳ್ಳೆಯ ಸ್ನೇಹಿತ. ಅಂದು ಮನೆ-ಮನೆಗೆ, ಕಛೇರಿಗಳಿಗೆ ಹೋಗಿ ಕಂಪ್ಯೂಟರ್ ದುರಸ್ಥಿ ಸೇವೆಯನ್ನು ನಿರ್ವಹಿಸುತ್ತಿದ್ದರು. ನೀನು ಹಿಂದೆ ನೋಡಬೇಡ, ಮುಂದಕ್ಕೆ ಹೋಗು, ನಗುಮುಖದ ಸೇವೆ ನೀಡು ಎಂದು ಹೇಳಿದ್ದೆ. ಬಳಿಕ ಅವರು ಈ ಭಾಗದಲ್ಲಿ ಸ್ವಂತ ಸಂಸ್ಥೆಯನ್ನು ಹೊಂದಿ ವ್ಯವಹಾರದಲ್ಲಿ ಸೈ ಎನಿಸಿಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವರು ನಂ.ವನ್ ಎನಿಸಿಕೊಂಡಿದ್ದಾರೆ. ಅನಿಲ್ ರವರು ತನ್ನ ಉದ್ಯಮದ ಜೊತೆಗೆ ಅನೇಕ ಸಂಘಸಂಸ್ಥೆಗಳಲ್ಲಿ ದುಡಿಯುವ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.


ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಇಂದಿನ ಅಗತ್ಯತೆ-ಗೋಪಾಲಕೃಷ್ಣ ಭಟ್:
ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ, ಗ್ರಾಹಕನ ಬೇಡಿಕೆಗೆ ತಕ್ಕಂತೆ ಪೂರೈಕೆ ಇಂದಿನ ಅಗತ್ಯತೆಯಾಗಿದ್ದು ಹಾಗೆ ಮಾಡಿದ್ದಲ್ಲಿ ಉದ್ಯಮ ಬೆಳೆಯುತ್ತದೆ ಇಲ್ಲದಿದ್ದರೆ ಕುಸಿಯುತ್ತದೆ. ಈ ನಿಟ್ಟಿನಲ್ಲಿ ಅವೆನ್ಯೂ ಕಂಪ್ಯೂಟರ್ಸ್ ಮಾಲಕ ನವೀನ್‌ರವರು ತನ್ನ ನಗುಮುಖದ ಸೇವೆ, ಬದ್ಧತೆ ಜೊತೆಗೆ ಉದ್ಯಮದಲ್ಲಿ ಬೆಳೆಯಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಿದ್ದಾರೆ. ಅವರಿಗೆ ಅವರ ಉದ್ಯಮದಲ್ಲಿ ಯಶಸ್ವಿಯಾಗಲು ಅವರ ಕುಲದೇವರು, ಮನೆದೇವರು ಆಶೀರ್ವದಿಸಲಿ ಎಂದರು.


ಸಂಸ್ಥೆಯಿಂದ ಭರವಸೆಕ್ಕೂ ಮಿಗಿಲಾದ ಸೇವೆ-ಕೆ.ಪಿ ಸಾದಿಕ್:
ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಕೆ.ಪಿ ಸಾದಿಕ್ ಮಾತನಾಡಿ, ಕಂಪ್ಯೂಟರ್ ತಂತ್ರಜ್ಞಾನ ಬಂದು ಹಲವಾರು ವರ್ಷವಾದರೂ ಪುತ್ತೂರಿನಲ್ಲಿ ಅದರ ಮಾರಾಟ ಹಾಗೂ ಸೇವೆಯ ಕೊರತೆಯಿತ್ತು. ಗ್ರಾಹಕರಿಗೆ ಭರವಸೆ ನೀಡುತ್ತೇವೆ ಎಂಬುದರ ಬದಲಾಗಿ ಅದಕ್ಕೆ ಮಿಗಿಲಾದ ಸೇವೆ ನೀಡುತ್ತೇವೆ ಎಂಬುದು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಅನಿಲ್‌ರವರ ಸೇವಾ ಕಾಳಜಿ ಅನುಕರಣೀಯವಾದದ್ದು. ಗ್ರಾಹಕರ ವ್ಯವಹಾರಕ್ಕೆ ಬೇಕಾದ ಬಜೆಟಿನಲ್ಲಿ ಮಾತ್ರವಲ್ಲ ಅವರನ್ನು ಅರ್ಥೈಸಿಕೊಂಡು ಕಂಪ್ಯೂಟರ್ ಸಾಧನಗಳನ್ನು ನೀಡುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದ್ದು ಉದ್ಯಮ ಇನ್ನೂ ಯಶಸ್ವಿಯಾಗಲಿ ಎಂದ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಕಾದ ತಂತ್ರಜ್ಞಾನ ಅಳವಡಿಸುವುದಿದ್ದರೆ ಅನಿಲ್‌ರವರಿಗೆ ಅವಕಾಶ ನೀಡಬಹುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರಲ್ಲಿ ಮನವಿ ಮಾಡಿಕೊಂಡರು.


ಅವೆನ್ಯೂ ಕಂಪ್ಯೂಟರ್ಸ್ ಸಂಸ್ಥೆಯ ಮಾಲಕ ಅನಿಲ್ ಕುಮಾರ್ ಒತ್ತೆಮುಂಡೂರುರವರ ತಂದೆ ಗುಡ್ಡಪ್ಪ ಪೂಜಾರಿ, ತಾಯಿ ಪುಷ್ಪಾವತಿ, ಪತ್ನಿ ಚೈತ್ರಾ, ಸಿಝ್ಲರ್ ಗ್ರೂಪ್ ಹಾಗೂ ಅಗ್ರಿಝೋನ್ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯಕುಮಾರ್ ಸುವರ್ಣ, ನರಿಮೊಗರು ಸುವರ್ಣ ಎಸ್ಟೇಟ್‌ನ ವೇದನಾಥ ಸುವರ್ಣ, ಯುವವಾಹಿನಿ ಅಧ್ಯಕ್ಷ ಜಯರಾಂ ಬಿ.ಎನ್, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಪ್ರೇರಣಾ ಸಂಸ್ಥೆಯ ನಾಗೇಶ್ ಕೆಡೆಂಜಿ, ಕೋಡಿಬೈಲು ಏಜೆನ್ಸೀಸ್‌ನ ಅಜೇಯ್ ರಾಮ್, ಅಕೌಂಟೆಂಟ್ ಭಾಸ್ಕರ್ ರಾವ್, ಫಾ.ಪತ್ರಾವೋ ಆಸ್ಪತ್ರೆಯ ಧರ್ಮಭಗಿನಿಯರು, ಪುತ್ತಿಲ ಪರಿವಾರ ಟ್ರಸ್ಟ್ ಸದಸ್ಯರ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ಅನಿಲ್ ಕುಮಾರ್ ಒತ್ತೆಮುಂಡೂರು ಸ್ವಾಗತಿಸಿದರು. ವಸಂತ್ ವೀರಮಂಗಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಕೀರ್ತನ್, ಯಜ್ಞೇಶ್, ಪ್ರಜ್ವಲ್, ಅನಿಲ್, ಪ್ರಿಯಾ, ಮೇಘ ಸಹಕರಿಸಿದರು.

ದಶಮಾನೋತ್ಸವದ ಕೊಡುಗೆಗಳು..
ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಪರಿಚಯಿಸುತ್ತಿದ್ದು, ರೂ.25999 ರಿಂದ ಲ್ಯಾಪ್‌ಟಾಪ್ಸ್, ರೂ.19999 ರಿಂದ ಡೆಸ್ಕ್‌ಟಾಪ್, ಕ್ಯಾಶ್‌ಬ್ಯಾಕ್ ಆಫರ್, ಫೈನಾನ್ಸ್ ಸೌಲಭ್ಯಗಳು, ಖಚಿತ ಉಡುಗೊರೆಗಳು, ಡೆಬಿಟ್/ಕ್ರೆಡಿಟ್ ಕಾರ್ಡ್ ಇಎಂಐ, ‘ಝೀರೊ’ ಡೌನ್ ಪೇಯ್ಮೆಂಟ್, ‘ಝೀರೊ’ ಬಡ್ಡಿದರ ಲಭ್ಯವಿದ್ದು, ಬಜಾಜ್ ಫೈನಾನ್ಸ್ ಹಾಗೂ ಪೈನ್ ಲ್ಯಾಬ್ಸ್ ಸಾಲ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ 9748689866, 7676299866 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಚೈತ್ರ ಮತ್ತು ಅನಿಲ್ ಕುಮಾರ್ ಒತ್ತೆಮುಂಡೂರು ದಂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಥಮ ಖರೀದಿ..
ಅವೆನ್ಯೂ ಕಂಪ್ಯೂಟರ್ಸ್ ಸಂಸ್ಥೆಯ ನವೀಕರಣದ ಉದ್ಘಾಟನಾ ಸಂದರ್ಭ ಕೈಜೋಡಿಸಿದ ಅಜಾರಾ ಕನ್ಸ್ಟ್ರಕ್ಷನ್ ಮಾಲಕ ರವೀಶ್ ದಂಪತಿ ಪ್ರಿಂಟರ್ ಅನ್ನು, ಉದ್ಯಮಿ ಜಿಗ್ನೇಶ್ ಸಾವಜಾನಿರವರು ಲ್ಯಾಪ್‌ಟಾಪ್ ಅನ್ನು ಖರೀದಿಸಿ ಶುಭ ಹಾರೈಸಿದರು.

*ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುತ್ತಿದೆ-ಸತೀಶ್ ಕೆಡೆಂಜಿ
*ಪ್ರೀತಿ, ವಿಶ್ವಾಸ, ನಗುಮುಖದ ಸೇವೆಯೊಂದಿಗೆ ಸಮಾಜಕ್ಕೆ ಕೊಡುಗೆ-ಪಂಜಿಗುಡ್ಡೆ ಈಶ್ವರ ಭಟ್
*ಜನಮಾನಸದಲ್ಲಿ ನೆಲೆಯೂರಿ ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದುವಂತಾಗಲಿ-ಅರುಣ್ ಪುತ್ತಿಲ
*ವ್ಯವಹಾರದಲ್ಲಿ ಸೈ, ಸ್ಪರ್ಧಾತ್ಮಕ ಯುಗದಲ್ಲಿ ನಂ.ವನ್-ಜಯಂತ್ ನಡುಬೈಲು
*ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಇಂದಿನ ಅಗತ್ಯತೆ-ಗೋಪಾಲಕೃಷ್ಣ ಭಟ್
*ಸಂಸ್ಥೆಯಿಂದ ಭರವಸೆಕ್ಕೂ ಮಿಗಿಲಾದ ಸೇವೆ-ಕೆ.ಪಿ ಸಾದಿಕ್

LEAVE A REPLY

Please enter your comment!
Please enter your name here