ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಜಾತ್ರಾ ಮಹೋತ್ಸವದಂಗವಾಗಿ ಫೆ.7ರಂದು ಅವಭೃತೋತ್ಸವ ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ ಅವಭೃತ ಅಭಿಷೇಕ ನಡೆದು, ಬಳಿಕ ಅವಭೃತ ಮೆರವಣಿಗೆ ಶ್ರೀ ದೇವಾಲಯದಿಂದ ಹೊರಟು ರಥ ಬೀದಿ, ಬ್ಯಾಂಕ್ ರಸ್ತೆ, ಗಾಂಧಿಪಾರ್ಕ್ ತನಕ ತೆರಳಿ ಅಲ್ಲಿಂದ ಶಾಲಾ ರಸ್ತೆಯ ಮೂಲಕ ದೇವಾಲಯಕ್ಕೆ ವಾಪಸಾಯಿತು. ಬಳಿಕ ಭಕ್ತಾದಿಗಳಿಂದ ಶ್ರೀ ದೇವರ ಮುಂದೆ ಉರುಳು ಸೇವೆ ನಡೆಯಿತು. ಬಳಿಕ ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ ಸಂಪ್ರೋಕ್ಷಣೆ ಮತ್ತಿತ್ತರ ಧಾರ್ಮಿಕ ವಿಧಿವಿಧಾನಗಳು ದೇವಾಲಯದಲ್ಲಿ ಜರಗಿತು. ಸಂಜೆ ಮಹಾಪೂಜೆ, ರಾತ್ರಿ ಸಮಾರಾಧನೆ, ರಾತ್ರಿ ಪೂಜೆ, ರಾತ್ರಿ ಉತ್ಸವ, ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಯಿತು.
![](https://puttur.suddinews.com/wp-content/uploads/2025/02/meravanige-1-1.jpg)
ಅವಭೃತೋತ್ಸವದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ್ ಶೆಣೈ, ಮೊಕ್ತೇಸರರಾದ ಯು. ನಾಗರಾಜ್ ಭಟ್, ಕೆ. ಅನಂತರಾಯ ಕಿಣಿ, ಡಾ. ಎಂ. ರತ್ನಾಕರ ಶೆಣೈ, ಪಿ. ದೇವಿದಾಸ್ ಭಟ್, ಪ್ರಮುಖರಾದ ಕರಾಯ ರಾಮಚಂದ್ರ ನಾಯಕ್, ಕೆ. ಶ್ರೀಕಾಂತ್ ಭಟ್, ಕರಾಯ ಗಣೇಶ್ ನಾಯಕ್, ಚೇತನ್ ಶೆಣೈ, ಕೆ.ರಾಘವೇಂದ್ರ ನಾಯಕ್, ಪಿ. ವಿನಾಯಕ್ ಪೈ, ಕೆ.ರವೀಂದ್ರ ಪ್ರಭು, ಕೆ. ಶ್ರೀನಿವಾಸ ಪಡಿಯಾರ್, ಕೆ. ಸುರೇಶ್ಕಿಣಿ, ಎಂ.ಶ್ರೀನಿವಾಸ ಭಟ್, ನೀನಿ ಸಂತೋಷ್ ಕಾಮತ್, ಕೆ.ನಾಗೇಶ್ ನಾಯಕ್, ಕೆ. ಶ್ರೀಕಾಂತ್ ಪ್ರಭು, ಕೆ. ಮಹೇಶ್ ಕಿಣಿ, ಕೆ. ಪಣಕಜೆ ಜಗದೀಶ್ ಶೆಣೈ, ಪ್ರಸಾದ್ ಶೆಣೈ, ದಿನೇಶ್ ಶೆಣೈ, ಎಸ್. ಮಂಜುನಾಥ್ ಭಟ್, ಪಿ. ಹರೀಶ್ ಪೈ, ವೇಣೂರು ಸತೀಶ್ ಕಾಮತ್, ಕೆ. ನರಸಿಂಹ ಪಡಿಯಾರ್, ಕೆ. ನಿತಿನ್ ಪಡಿಯಾರ್, ವಿದ್ಯಾಧರ್ ಮಲ್ಯ, ಕೆ.ರಾಘವೇಂದ್ರ ಪ್ರಭು, ಎನ್. ಯೋಗೀಶ್ ಶೆಣೈ, ಉಲ್ಲಾಸ್ ಭಟ್, ಹರೀಶ್ ಕಿಣಿ, ಸರ್ವೇಶ್ ಭಟ್, ಸಾತ್ವಿಕ್ ಪಡಿಯಾರ್ .ಕೆ, ಕೆ.ರಾಜೇಶ್ ಪೈ, ಅರ್ಜುನ್ ಶೆಣೈ, ಕೆ. ಸತೀಶ್ ನಾಯಕ್, ವೈ. ಅನಂತ ಶೆಣೈ, ಯು. ಪ್ರದೀಪ್ ನಾಯಕ್, ಕೆ. ವಿವೇಕಾನಂದ ಪ್ರಭು, ಕೆ. ಮಾಧವ ನಾಯಕ್, ಕೆ. ಗಿರೀಶ್ ನಾಯಕ್, ಕೆ. ವಿಘ್ನೇಶ್ ಪೈ ಬೆಂಗಳೂರು, ವೈ. ವೆಂಕಟೇಶ್ ಶೆಣೈ ಜುಪಿಟರ್, ನ್ಯಾಯವಾದಿ ರಮೇಶ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕರಾದ ರಾಮಕೃಷ್ಣ ಪ್ರಭು ಹಾಗೂ ಮಂಜುನಾಥ್ ನಾಯಕ್, ಪದ್ಮನಾಭ ಕಾಮತ್ ಸಹಕರಿಸಿದರು.