ದೇಲಂಪಾಡಿ: ಅನ್ನಛತ್ರ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧನಸಹಾಯ

0

ಪುತ್ತೂರು: ದೇಲಂಪಾಡಿ ಶ್ರೀ ರಾಮ ಭಜನಾ ಮಂದಿರದ ಅನ್ನ ಛತ್ರದ ನಿರ್ಮಾಣ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ಲಕ್ಷದ ಐವತ್ತು ಸಾವಿರ ರೂ ಮಂಜೂರಾಗಿದ್ದು, ಫೆ.7ರಂದು ಶ್ರೀರಾಮ ಭಜನಾ ಮಂದಿರದಲ್ಲಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.


ದೇಲಂಪಾಡಿ ಒಕ್ಕೂಟದ ಅಧ್ಯಕ್ಷ ಕುಸುಮಾಧರ ವಾಲ್ತಾಜೆ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯ ರಾಮಯ್ಯ ರೈ ಮಂಜೂರಾತಿ ಪತ್ರವನ್ನು ಅನ್ನಛತ್ರ ನಿರ್ಮಾಣ ಸಮಿತಿಯ ಅಧ್ಯಕ್ಷ ಶಿವರಾಮ ಕಲ್ಲೂರಾಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಸುರೇಶ್, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಬಂದ್ಯಡ್ಕ, ಕಾರ್ಯದರ್ಶಿ ಉದಯ ಕುಮಾರ್ ದೇಲಂಪಾಡಿ, ಬಾಲಕೃಷ್ಣ ಗೌಡ ಬೆಳ್ಳಿಪ್ಪಾಡಿ, ಸೇವಾ ಪ್ರತಿನಿಧಿ ದಿವ್ಯಾ, ಗ್ರಾಮೀಣ ಸೇವಾದಾತರಾದ ಸುಮಲತಾ, ಒಕ್ಕೂಟ ಕಾರ್ಯದರ್ಶಿ ಕುಸುಮ, ನಿಕಟಪೂರ್ವ ಅಧ್ಯಕ್ಷ ಸಂಜೀವ ರೈ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here