ಫೆ.10: ತಿರ್ಲೆ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ- ಗೋಳಿತ್ತೊಟ್ಟಿನ ರಿಕ್ಷಾ ಚಾಲಕರಿಂದ ಉಚಿತ ಸೇವೆ

0

ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ 6ನೇ ದಿನವಾದ ಫೆ.10ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಸೇವೆ ನೀಡಲು ಗೋಳಿತ್ತೊಟ್ಟಿನ ರಿಕ್ಷಾ ಚಾಲಕರು ನಿರ್ಧರಿಸಿದ್ದಾರೆ.


ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆ ತನಕ ಗೋಳಿತ್ತೊಟ್ಟು ಜಂಕ್ಷನ್‌ನಿಂದ ತಿರ್ಲೆ ದೇವಸ್ಥಾನಕ್ಕೆ, ತಿರ್ಲೆ ದೇವಸ್ಥಾನದಿಂದ ಗೋಳಿತ್ತೊಟ್ಟು ಜಂಕ್ಷನ್ ತನಕ ಹಾಗೂ ಚಿಲುಮೆ ಬಸ್‌ನಿಲ್ದಾಣದಿಂದ ತಿರ್ಲೆ ದೇವಸ್ಥಾನಕ್ಕೆ, ತಿರ್ಲೆ ದೇವಸ್ಥಾನದಿಂದ ಚಿಲುಮೆ ಬಸ್‌ನಿಲ್ದಾಣದ ತನಕ ಉಚಿತ ಸೇವೆ ಇರಲಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಈ ಸೌಕರ್ಯ ಪಡೆದುಕೊಳ್ಳುವಂತೆ ರಿಕ್ಷಾ ಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here