ಇಂದಿನ ಕಾರ್ಯಕ್ರಮ(10/02/2025)

0

ಪಾಣಾಜೆ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಮಕ್ಕಳ ಗ್ರಾಮಸಭೆ
ಕೆಯ್ಯೂರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಗ್ರಾಮಸಭೆ
ಕೂರ ಅಂಗನವಾಡಿಯಲ್ಲಿ ಅಪರಾಹ್ನ ೨ಕ್ಕೆ ಕುದ್ಮಾರು ೨ನೇ ವಾರ್ಡ್, ಕಾಯಿಮಣ ಅಂಗನವಾಡಿಯಲ್ಲಿ ೨.೩೦ಕ್ಕೆ ಕಾಯಿಮಣ ೨ನೇ ವಾರ್ಡ್‌ನ ವಾರ್ಡುಸಭೆ
ಇಚ್ಲಂಪಾಡಿ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕೌಕ್ರಾಡಿ ಗ್ರಾ.ಪಂ ಗ್ರಾಮಸಭೆ
ರಾಮಕುಂಜ ಗ್ರಾ.ಪಂನಿಂದ ಅಂಬೇಡ್ಕರ್ ಭವನ ಆರಟಿಗೆಯಲ್ಲಿ ಬೆಳಿಗ್ಗೆ ೧೧ಕ್ಕೆ ಹಳೆನೇರಂಕಿ ೧, ೨ನೇ ವಾರ್ಡ್‌ನ ವಾರ್ಡುಸಭೆ
ಸವಣೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ನೂಜಿಬಾಳ್ತಿಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೧ಕ್ಕೆ ಬೆಳ್ಳಿಪ್ಪಾಡಿ ೨ನೇ ವಾರ್ಡ್, ಕೋಡಿಂಬಾಡಿ ಗ್ರಾ.ಪಂ ಕಛೇರಿಯಲ್ಲಿ ಅಪರಾಹ್ನ ೧೨ಕ್ಕೆ ಕೋಡಿಂಬಾಡಿ ೨ನೇ ವಾರ್ಡ್, ಕೊಡಿಮರ ಅಂಗನವಾಡಿ ಕೇಂದ್ರದಲ್ಲಿ ೧.೩೦ಕ್ಕೆ ಬೆಳ್ಳಿಪಾಡಿ ೧ನೇ ವಾರ್ಡ್, ಮಠಂತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ೩ಕ್ಕೆ ಕೋಡಿಂಬಾಡಿ ೧ನೇ ವಾರ್ಡ್‌ನ ವಾರ್ಡುಸಭೆ
ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ, ಅಪರಾಹ್ನ ೨.೩೦ರಿಂದ ಶೈಕ್ಷಣಿಕ ಕಾರ್ಯಕ್ರಮ, ಸಂಜೆ ೬.೩೦ರಿಂದ ಸಮಾರೋಪ ಸಮಾರಂಭ, ರಾತ್ರಿ ೧೦.೩೦ಕ್ಕೆ ಶಿಬಿರ ಜ್ಯೋತಿ ಕಾರ್ಯಕ್ರಮ
ಕುಂಜೂರುಪಂಜ ಇರುವೆರ್ ಉಳ್ಳಾಕುಲ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀದುರ್ಗಾ ಭಜನಾ ಮಂದಿರದ ೨೨ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ೬ರಿಂದ ಅರ್ಧ ಏಕಾಹ ಭಜನೆ, ೧೨ ಕಾಯಿ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ೮.೪೮ರಿಂದ ಇರುವೆರ್ ಉಳ್ಳಾಕುಲ ಬಿಂಬ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ೧೨.೩೦ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬.೧೫ರಿಂದ ಧಾರ್ಮಿಕ ಸಭೆ, ರಾತ್ರಿ ೮ರಿಂದ ಸಾಮೂಹಿಕ ಶ್ರೀ ದುರ್ಗಾಪೂಜೆ
ಶಾಂತಿಗೋಡು ಗ್ರಾಮ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸಂಜೆ ರಂಗಪೂಜೆ
ಟಿರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಹಸಿರುವಾಣಿ ಸಮರ್ಪಣೆ, ೧೦.೩೦ರಿಂದ ಬಲಿ ಹೊರಟು ಉತ್ಸವ, ಸಂಜೆ ೬.೩೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಕಟ್ಟೆಪೂಜೆಗಳು
ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೫.೩೦ರಿಂದ ಮಹಾಗಣಪತಿ ಹೋಮ, ೬ರಿಂದ ಅರ್ಧ ಏಕಾಹ ಭಜನೆ, ೮.೪೮ರಿಂದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಅಷ್ಟಬಂಧ ಕ್ರಿಯೆ, ಜೀವ ಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ಶ್ರೀ ಕೊಣಾಲು ದೈವದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧೧.೩೦ರಿಂದ ಜೀವಕಲಶ ಶಯ್ಯಾರೋಪಣ, ೧೨ರಿಂದ ಯಕ್ಷಗಾನ ತಾಳಮದ್ದಳೆ, ೧ರಿಂದ ಪ್ರತಿಷ್ಠಾ ಬಲಿ, ಮಹಾಪೂಜೆ, ಸಂಜೆ ೬.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೯ರಿಂದ ಯಕ್ಷಗಾನ-ಸಾಕೇತ ಸಾಮ್ರಾಜ್ಞಿ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್
ಟಿಅರಿಯಡ್ಕ ಗ್ರಾಮದ ಕುರಿಂಜ ಕುಂಟಾಪು ಶ್ರೀ ವರ್ಣರ ಪಂಜುರ್ಲಿ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೭ಕ್ಕೆ ಗಣಪತಿ ಹವನ, ೮.೪೮ರಿಂದ ಬ್ರಹ್ಮಕಲಶ ಪೂಜೆ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ೧೦.೩೦ಕ್ಕೆ ಸಭಾ, ಸನ್ಮಾನ ಕಾರ್ಯಕ್ರಮ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೯.೩೦ರಿಂದ ಶ್ರೀ ಕುಪ್ಪೆ ಪಂಜುರ್ಲಿ, ಶ್ರೀ ಕಲ್ಲುರ್ಟಿ ದೈವದ ನೇಮ


ಶುಭಾರಂಭ
ಪುತ್ತೂರು ಕೋರ್ಟ್ ರಸ್ತೆಯ ಶ್ರೀ ಹರಿ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಬೆಳಿಗ್ಗೆ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಶಾಖೆ ಸ್ಥಳಾಂತರಗೊಂಡು ಶುಭಾರಂಭ

LEAVE A REPLY

Please enter your comment!
Please enter your name here