ಇಂದಿನ ಕಾರ್ಯಕ್ರಮ (11/02/2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಹಿನ್ನೆಲೆ ಬೆಳಿಗ್ಗೆ ೯ರಿಂದ ಭಕ್ತರಿಂದ ಕರಸೇವೆ
ಪುತ್ತೂರು ತಾಲೂಕು ಆಡಳಿತ ಸೌಧ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ರಿಂದ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಸವಿತಾ ಮಹರ್ಷಿ ಜಯಂತಿ ದಿನಾಚರಣೆ
ಪುತ್ತೂರು ರಾಧಕೃಷ್ಣ ಬಿಲ್ಡಿಂಗ್, ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ರಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಪುತ್ತೂರು ಮನೀಷಾ ಹಾಲ್‌ನಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ಅಧಿಕೃತ ಭೇಟಿ
ಪುತ್ತೂರು ತಾಲೂಕು ಸರ್ಕಾರಿ ನೌಕರರ ಸಹಕಾರಿ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಮರ್ಧಾಳ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮರ್ದಾಳ ಗ್ರಾ.ಪಂ ಗ್ರಾಮಸಭೆ
ಬರೆಪ್ಪಾಡಿ ಅಂಗನವಾಡಿಯಲ್ಲಿ ಬೆಳಿಗ್ಗೆ ೧೦ಕ್ಕೆ ಕುದ್ಮಾರು ೧ನೇ ವಾರ್ಡ್, ಬೆಳಂದೂರು ಪಂಚಾಯತ್ ಸಭಾಭವನದಲ್ಲಿ ಅಪರಾಹ್ನ ೨ಕ್ಕೆ ಬೆಳಂದೂರು ೧ನೇ ವಾರ್ಡ್, ಅಬೀರ ಅಂಗನವಾಡಿಯಲ್ಲಿ ೩ಕ್ಕೆ ಬೆಳಂದೂರು ೨ನೇ ವಾರ್ಡ್‌ನ ವಾರ್ಡುಸಭೆ
ರೆಂಜಿಲಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ಕ್ಕೆ ಬೆಳಿಗ್ಗೆ ೧೦ಕ್ಕೆ ರೆಂಜಿಲಾಡಿ ೧ನೇ ವಾರ್ಡ್, ಬೇರಿಕೆ ಕಿ.ಪ್ರಾ. ಶಾಲೆಯಲ್ಲಿ ೧೧.೩೦ಕ್ಕೆ ನೂಜಿಬಾಳ್ತಿಲ ೧ನೇ ವಾರ್ಡ್, ಅಡೆಂಜ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೨ಕ್ಕೆ ನೂಜಿಬಾಳ್ತಿಲ ೨ನೇ ವಾರ್ಡ್, ನೂಜಿಬಾಳ್ತಿಲ ಗ್ರಾ.ಪಂ ಸಭಾಂಗಣದಲ್ಲಿ ೩.೩೦ಕ್ಕೆ ನೂಜಿಬಾಳ್ತಿಲ ೩ನೇ ವಾರ್ಡ್‌ನ ವಾರ್ಡುಸಭೆ
೩೪ನೇ ನೆಕ್ಕಿಲಾಡಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಅನಂತಾಡಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦ಕ್ಕೆ ಸಾಮಾನ್ಯ ಸಭೆ, ಮಧ್ಯಾಹ್ನ ೧೨ಕ್ಕೆ ಮಹಿಳಾ ಗ್ರಾಮಸಭೆ
ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ಕಾರ್ಜಾಲು ಗುತ್ತಿನಲ್ಲಿ ಬೆಳಿಗ್ಗೆ ೯ಕ್ಕೆ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ದೈವಸ್ಥಾನದಲ್ಲಿ ೧೧.೩೦ಕ್ಕೆ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ೧೨.೩೦ರಿಂದ ಅನ್ನಸಂತರ್ಪಣೆ, ರಾತ್ರಿ ೭.೩೦ಕ್ಕೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡುವುದು, ೯.೩೦ಕ್ಕೆ ಗೊಂದೋಳು ಪೂಜೆ, ೧೨ಕ್ಕೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತ
ಹನುಮಗಿರಿ ಅಮರಗಿರಿ ಶ್ರೀ ಭಾರತೀ ಅಮರಜ್ಯೋತಿ ಮಂದಿರದಲ್ಲಿ ಬೆಳಿಗ್ಗೆ ೧೦.೩೦ರಿಂದ ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದಿಂದ ಭಾರತ ಮಾತೆಗೆ, ಯೋಧರ ಸ್ಮಾರಕಕ್ಕೆ ಗೌರಾವರ್ಪಣೆ-ಯೋಧ ಮಿಲನ
ಶಾಂತಿಗೋಡು ಗ್ರಾಮ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ರಾತ್ರಿ ೮ರಿಂದ ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಬರುವುದು, ೯ಕ್ಕೆ ಶ್ರೀ ಶಿರಾಡಿ ದೈವದ ಭಂಡಾರ ತೆಗೆಯುವುದು
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ನಂದಾದೀಪೋತ್ಸವ, ೯ರಿಂದ ಉತ್ಸವ, ಮಧ್ಯಾಹ್ನ ೧೧ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಯಕ್ಷಗಾನ ತಾಳಮದ್ದಳೆ, ೧ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಬಲಿ ಹೊರಡುವುದು, ಕಟ್ಟೆಪೂಜೆಗಳು, ರಾತ್ರಿ ೮.೩೦ರಿಂದ ಶ್ರೀ ರಾಮ ಸಂದರ್ಶನೋತ್ಸವ, ೯.೩೦ರಿಂದ ಪೊರಿಪುದಪ್ಪೆ ಜಲದುರ್ಗೆ ತುಳು ನಾಟಕ
ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಣಿಕೆ ಡಬ್ಬಿ, ಬಲಿವಾಡ ಸಹಿತ ಹೊರೆಕಾಣಿಕೆ ಸಮರ್ಪಣೆ, ಕಾಂಚನ ಬಸ್‌ನಿಲ್ದಾಣದಿಂದ ದೇವಸ್ಥಾನದ ತನಕ ಹೊರೆಕಾಣಿಕೆ ಮೆರವಣಿಗೆ, ಮಧ್ಯಾಹ್ನ ಅನ್ನಸಂತರ್ಪಣೆ
ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ ಎದುರು ಭಾಗದಲ್ಲಿ ಸಂಜೆ ೫ರಿಂದ ಕುಂಬ್ರ ವರ್ತಕರ ಸಂಘದ ಪದ ಸ್ವೀಕಾರ
ಕುಂಜೂರುಪಂಜ ಇರುವೆರ್ ಉಳ್ಳಾಕುಲ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಇರುವೆರ್ ಉಳ್ಳಾಕುಲು ದೈವಗಳಿಗೆ ನೇಮೋತ್ಸವ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ, ಸಂಜೆ ೬.೧೫ರಿಂದ ಧಾರ್ಮಿಕ ಸಭೆ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್
ಕೆದಂಬಾಡಿ ಇದುಪ್ಪಾಡಿ ಮಂಜಕೊಟ್ಯ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹೋಮ, ೯.೩೦ಕ್ಕೆ ನಾಗತಂಬಿಲ, ೧೦.೩೦ಕ್ಕೆ ದೈವಗಳ ತಂಬಿಲ, ೧೧.೪೫ಕ್ಕೆ ಪುಳಿಮರಡ್ಕ ಸ್ಥಾನದಲ್ಲಿ ತಂಬಿಲ, ಸಂಜೆ ೬.೧೫ಕ್ಕೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡುವುದು, ರಾತ್ರಿ ೭.೪೫ಕ್ಕೆ ಕೆಂಚಿರಾಯ ಸೇವೆ
ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ವಾರ್ಷಿಕ ಮಾರಿ ನೇಮೋತ್ಸವದ ಪ್ರಯುಕ್ತ ಶ್ರೀ ಶಿರಾಡಿ ದೈವ ರಂಗಮಂಟಪದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈಭವ, ರಾತ್ರಿ ೯.೩೦ರಿಂದ ಮನಸ್ ಎನ್ನಿಲೆಕ ತುಳು ನಾಟಕ
ಅರಿಯಡ್ಕ ಗ್ರಾಮದ ಕುರಿಂಜ ಕುಂಟಾಪು ಶ್ರೀ ವರ್ಣರ ಪಂಜುರ್ಲಿ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಶ್ರೀ ವರ್ಣರ ಪಂಜುರ್ಲಿ ದೈವದ ನೇಮ, ಮಧ್ಯಾಹ್ನ ೧೨ರಿಂದ ಅನ್ನಸಂತರ್ಪಣೆ, ಸಂಜೆ ೪ಕ್ಕೆ ರಾಹುಗುಳಿಗನಿಗೆ ತಂಭಿಲ ಸೇವೆ
ಬೆಳ್ತಂಗಡಿ ತಾಲೂಕು ಸವಣಾಲು ಕಾಳಿಕಾಂಬ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ರಾತ್ರಿ ೯ರಿಂದ ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ನಾಗ ಮಾಣಿಕ್ಯ ತುಳು ನಾಟಕ

LEAVE A REPLY

Please enter your comment!
Please enter your name here