ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವದ  ಪೂರ್ವಭಾವಿ ಸಭೆ

0

ಬಡಗನ್ನೂರು: ಮಾ.22 ರಂದು ನಡೆಯುವ  ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ಅಂಗವಾಗಿ ಪೂರ್ವಭಾವಿ ಸಭೆಯು ಫೆ.12 ರಂದು ಗರಡಿ ವಠಾದಲ್ಲಿ ನಡೆಯಿತು. 

ಸಭೆಯಲ್ಲಿ  ನೇಮೋತ್ಸವ ಅಮಂತ್ರಣ ಪತ್ರಿಕೆ ತಯಾರಿ ಮತ್ತು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ ಸಭಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.

ಈ ಸಂದರ್ಭದಲ್ಲಿ  ಗರಡಿ ಅಡಳಿತ ಮಂಡಳಿ  ಗೌರವಾಧ್ಯಕ್ಷ ರಾಜೀವ ರೈ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕರುಣಾಕರ ಪೆರ್ವೋಡಿ, ಕೋಶಾಧಿಕಾರಿ  ಕೃತಿಕಾ ಪೆರ್ವೋಡಿ, ಸದಸ್ಯರುಗಳಾದ ಪ್ರದೀಪ್  ಶಾಂತಿವನ,  ಕಾರ್ತಿಕ್ ಪೆರ್ವೋಡಿ,  ಕರುಣಾಕರ ಶಾಂತಿವನ, ಗಂಗಾಧರ ಶಾಂತಿವನ  ದಿನೇಶ್ ಕುಮಾರ್ ಗಂಗಾಧರ ಎಂ ಎಸ್ ಪಾಪೆಮಜಲು ಸುನೀಲ್ ಕುಮಾರ್ ಪಾಪೆಮಜಲು ಸ್ಥಳೀಯರಾದ ಬಾಲಕ್ಕ ಬಿ, ರತ್ನ  ಪಾಪೆಮಜಲು ಶರತ್  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here