ʼನಾನು ನಿಮ್ಮ ಪರವಾಗಿ ಇದ್ದೇನೆʼ- ಮಾಜಿ ಶಾಸಕ ಮಠಂದೂರು
ಪುತ್ತೂರು :ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ 2ನೇ ಹಂತದ ಅನಿರ್ದಿಷ್ಠಾವಧಿ ಮುಷ್ಕರ ರಾಜ್ಯವಾಪ್ತಿಯಲ್ಲಿ ನಡೆಯುತ್ತಿದ್ದು, ಪುತ್ತೂರು ತಾಲೂಕು ಆಡಳಿತದ ಮುಂದೆ ತಾಲೂಕು ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.
ʼನಾನು ನಿಮ್ಮ ಪರವಾಗಿ ಇದ್ದೇನೆ ನೀವು ಚೆನ್ನಾಗಿ ಕೆಲಸ ಮಾಡಿ. ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಿ. ಎಲ್ಲಾ ಇಲಾಖೆಗಳಿಗೆ ಪೆರಂಟ್ ಬಾಡಿ ಕಂದಾಯ ಇಲಾಖೆ. ಆ ಕಂದಾಯ ಇಲಾಖೆ ಚೆನ್ನಾಗಿ ಇರುತ್ತದೆ. ನಿಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಕಿಶೋರ್ ಬೊಟ್ಯಾಡಿ ಅವರನ್ನು ನಿಮ್ಮಲ್ಲಿಗೆ ಬರಲು ಹೇಳುತ್ತೇನೆ. ಜೊತೆಗೆ ಸರಕಾರಕ್ಕೆ ಯಾವ ರೀತಿಯಲ್ಲಿ ಒತ್ತಡ ಹಾಕಬಹುದು. ಆ ರೀತಿಯಲ್ಲಿ ಒತ್ತಡ ಹಾಕುವ ಕೆಲಸ ಮಾಡುತ್ತೇನೆ. ನಾನೀಗ ಮಾಜಿ ಶಾಸಕ ಆದರೂ ನಮ್ಮ ಶಾಸಕರ ಮೂಲಕ ಒತ್ತಡ ಹಾಕುವ ಕೆಲಸ ಮಾಡುತ್ತೇನೆʼ ಎಂದು ಹೇಳಿದರು.