ಸವಣೂರು : ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ದೈವದ ವಾರ್ಷಿಕ ನೇಮೋತ್ಸವ ಹಾಗೂ ಪ್ರತಿಷ್ಠಾ ದಿನ ಮಾ.9ರಂದು ನಡೆಯಲಿದೆ. ಇದರ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಂಜಪ್ಪ ರೈ ,ಕಾರ್ಯಾಧ್ಯಕ್ಷರಾದ ದೇವರಾಜ ಆಳ್ವ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಕೋಶಾಧಿಕಾರಿ ಬಾಬು ಎಸ್ ಶಾಂತಿಮೂಲೆ, ಉಪಾಧ್ಯಕ್ಷರಾದ ಸುಧಾಮ ಮಣಿಯಾಣಿ,ಸುಂದರ ನಾಯ್ಕ ನಾಗನಮಜಲು,ಜತೆ ಕಾರ್ಯದರ್ಶಿ ದಿನೇಶ್ ಶಾಂತಿಮೂಲೆ ಹಾಗೂ ಸಮಿತಿ ಸದಸ್ಯರಾದ ಅಶೋಕ ,ಶ್ರೀಧರ ,ತಿಮ್ಮ ನಾಯ್ಕ ,ಸುಬ್ಬ ನಾಯ್ಕ, ಕೃಷ್ಣ ನೆಲ್ಲಿಪಡ್ಪು,ಕೃಷ್ಣಪ್ಪ ನಾಯ್ಕ,ಹಿರಿಯಣ್ಣ ,ಪ್ರವೀಣ್ ಶಾಂತಿಮೂಲೆ ಮೊದಲಾದವರಿದ್ದರು.