ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಸದಸ್ಯರೂ ಆಗಿದ್ದು, ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಮಸ್ಕರೇನ್ಹಸ್, ನಿರ್ದೇಶಕರಾಗಿ ಆಯ್ಕೆಯಾದ ವಿಜಯ್ ವಿಲ್ಫ್ರೆಡ್ ಡಿ’ಸೋಜರವರನ್ನು ಸನ್ಮಾನಿಸುವ ಕಾರ್ಯಕ್ರಮ ರೋಟರಿ ಪುತ್ತೂರು ಸ್ವರ್ಣದ ವತಿಯಿಂದ ಫೆ.13 ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಇವರು ಮಾತನಾಡಿ, ನಮ್ಮ ಕ್ಲಬ್ ಸದಸ್ಯರು ಪುತ್ತೂರಿನ ಪ್ರತಿಷ್ಠಿತ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸೇವೆಯನ್ನು ಮಾಡಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ಲೋರಿಯಾ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನಸ್ ರವರು ಕ್ಲಬ್ ವತಿಯಿಂದ ನಮ್ಮನ್ನು ಗೌರವಿಸಿರುವುದಕ್ಕೆ ಧನ್ಯವಾದವನ್ನು ಸಮರ್ಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ವಲಯ ಸೇನಾನಿ ಕಳುವಾಜೆ ವೆಂಕಟರಮಣ ಗೌಡರವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಮಣ್ಣ ರೈ ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ಸನೋರಿಟಾ ಆನಂದ್ ವಾರದ ವರದಿಯನ್ನು ಮಂಡಿಸಿದರು. ನಿಯೋಜಿತ ಅಧ್ಯಕ್ಷರಾದ ಸುಭಾಷ್ ರೈ ಬೆಳ್ಳಿಪ್ಪಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರಾದ ಭಾಸ್ಕರ ಕೋಡಿಂಬಾಳ, ದಿನೇಶ್ ಆಚಾರ್ಯ, ದೀಪಕ್ ಬೊಳ್ವಾರ್, ಪ್ರವೀಣ್ ರೈ ಸಾಂತ್ಯ, ಪಿ.ಎಚ್.ಎಫ್. ಕೆ.ಪಿ.ನಾರಾಯಣ ರೈ ಸಹಿತ ಹಲವಾರು ಸದಸ್ಯರು ಹಾಜರಿದ್ದರು.