ವಿಟ್ಲದಲ್ಲಿ ಸಾರಿಗೆ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ

0

ಹೆಲ್ಮೆಟ್ ಧರಿಸದವರಿಗೆ ಮಿತದರದಲ್ಲಿ ಹೆಲ್ಮೆಟ್ – ನಿಯಮ ಉಲ್ಲಂಘಿಸಿದವರಿಗೆ ಕಾನೂನು ಪಾಠ

ವಿಟ್ಲ: ನಾಲ್ಕು ಮಾರ್ಗದ ಜಂಕ್ಷನ್ ನಲ್ಲಿ ಬಂಟ್ಬಾಳ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ವಿಟ್ಲ ಠಾಣಾ ಪೊಲೀಸರು ಜಂಟಿಯಾಗಿ ಸಾರಿಗೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಾಹನ ಸಂಚಾರ ನಿಯಮಗಳನ್ನು ಪಾಲನೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸುವ ಬದಲು ಅವರಿಗೆ ಮಾಹಿತಿ ನೀಡಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ‌ ಸವಾರರಿಗರ ಮಿಯದರದಲ್ಲಿ ಹೆಲ್ಮೆಟ್ ವಿತರಣೆ ಮಾಡಿದರು.

ಎಳೆಯ ಪುಟಾಣಿಗಳ ಬೇಜವಾಬ್ದಾರಿಯಿಂದ ಕುಳ್ಳಿರಿಸುವ ಸವಾರರಿಗೆ ಇಲಾಖೆಯ ವತಿಯಿಂದಲೇ ಉಚಿತ ಸೇಫ್ಟಿ ಬೆಲ್ಟ್ ವಿತರಿಸಲಾಗಿದೆ. ಶಾಲಾ ಮಕ್ಕಳನ್ನು ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿಸಿ ಕರೆದೊಯ್ಯುತ್ತಿದ್ದ ಶಾಲಾ ಬಸ್ಸುಗಳ ದಾಖಲೆ ಪರಿಶೀಲಿಸಲಾಯಿತು. ಈ ಸಂದರ್ಭ ಇನ್ಸೂರೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೇ ಐದಾರು ವರ್ಷಗಳಿಂದ ಓಡಾಡುತ್ತಿದ್ದ ಐದು ಬಸ್ಸುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕರು ಹಾಗೂ ನಿಯಮ ಪಾಲಿಸುವ ವಾಹನ ಸವಾರರ ಶ್ಲಾಘನೆಗೆ ಪಾತ್ರವಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಚರಣೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಕಾನೂನಿನ ಶಿಕ್ಷೆ ನೀಡಲಿದ್ದೇವೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಛೇರಿಯ ಅಧಿಕಾರಿಗಳಾದ ಚರಣ್, ಪ್ರಮೋದ್ ಕೆ.ಭಟ್, ಸಚಿನ್, ಪೊಲೀಸ್ ಅಧಿಕಾರಿಗಳಾದ ಬಿ.ಎಸ್.ನಾಯಕ, ವಿದ್ಯಾ ಕೆ.ಜೆ. ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here