ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿದ್ದು ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಕಣ್ಣಾರಾಯ ಬನೇರಿ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಅರ್ಚಕ ಸ್ಥಾನದಿಂದ ನಾಗೇಶ್ ಕುದ್ರೆತ್ತಾಯ, ಪ.ಜಾತಿ/ಪ.ಪಂಗಡದಿಂದ ಪದ್ಮಯ್ಯ ನಾಯ್ಕ ಬಂಡಿಕಾನ, ಮಹಿಳಾ ಸ್ಥಾನದಿಂದ ಶಾರದಾ ಬಂಡಿಕಾನ, ಗುಲಾಬಿ ಎನ್. ಶೆಟ್ಟಿ, ಸಾಮಾನ್ಯ ಸ್ಥಾನದಿಂದ ಜಿ.ಪದ್ಮಯ್ಯ ಗೌಡ ಗುತ್ತಿನಪಾಲು, ಗಣೇಶ್ ಸಾಲಿಯಾನ್ ಪಜಿಮಣ್ಣು, ಧನಂಜಯ ಕುಲಾಲ್ ಕಂಪ, ರಘುನಾಥ ಶೆಟ್ಟಿ ಪೊನೋನಿ ಹಾಗೂ ಬಾಲಕೃಷ್ಣ ಕಣ್ಣಾರಾಯ ಬನೇರಿಯವರನ್ನು ಸದಸ್ಯರುಗಳನ್ನಾಗಿ ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದರು.
ಫೆ.12ರಂದು ದೇವಸ್ಥಾನದಲ್ಲಿ ನೂತನ ಸಮಿತಿ ಸದಸ್ಯರು ಸಭೆ ನಡೆಸಿ ಅಧ್ಯಕ್ಷರನ್ನಾಗಿ ಬಾಲಕೃಷ್ಣ ಕಣ್ಣಾರಾಯರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಹಾಗೂ ಅರ್ಚಕ ಸ್ಥಾನದಿಂದ ನಾಗೇಶ್ ಕುದ್ರೆತ್ತಾಯರವರನ್ನು ಆಯ್ಕೆ ಮಾಡಲಾಯಿತು.