ಸವಣೂರು :ಸವಣೂರು ಗ್ರಾಮದ ಆರೇಲ್ತಡಿ ಕೆಡೆಂಜಿಯಲ್ಲಿ ಶ್ರೀ ಕೊರಗಜ್ಜ ದೈವದ ನೇಮೋತ್ಸವವು ಫೆ.15ರಂದು ನಡೆಯಿತು. ಫೆ.15ರಂದು ಬೆಳಿಗ್ಗೆ ಗಣಹೋಮ ,ಸಂಜೆ ಸವಣೂರು ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಆರೇಲ್ತಡಿ ಮನೆಯ ವಿಮಲಾ ಮತ್ತು ಮನೆಯವರು, ನಿಶಾಂತ್ ಕೆಡೆಂಜಿ ಭಕ್ತಾದಿಗಳನ್ನು ಬರಮಾಡಿಕೊಂಡರು.
ನೇಮೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.