ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ’ಸಮೃದ್ಧಿ ನಿಲಯ’ದಲ್ಲಿರುವ ಸ್ವಾಮಿ ಶ್ರೀ ಕೊರಗಜ್ಜ ಸನ್ನಿಧಿಯಲ್ಲಿ ಫೆ.15 ರಂದು ಸ್ವಾಮಿ ಶ್ರೀ ಕೊರಗಜ್ಜ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರಗಿತು.

ಸಂಜೆ ಶ್ರೀ ದೈವದ ಭಂಡಾರ ತೆಗೆದು ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮವು ನಡೆಯಿತು. ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಸಮೃದ್ಧಿ ನಿಲಯದ ಬಾಬು ಮಾಸ್ತರ್ ತೆಗ್ಗು , ಶಶಿಕಲಾ ಎಂ ಮತ್ತು ಮಕ್ಕಳು ಹಾಗೂ ತೆಗ್ಗು ಕುಟುಂಬಸ್ಥರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.