ಪುತ್ತೂರು: ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ಕಾವು ಜಂಕ್ಷನ್ ಘಟಕ(ಈಶ್ವರಮಂಗಲ ಕ್ರಾಸ್ ರೋಡ್) ಇದರ ನೂತನ ಅಧ್ಯಕ್ಷ ಜುಬೇರರವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದಿಂದ ರೂ.5,೦೦೦ ಧನಸಹಾಯ ನೀಡಲಾಯಿತು.

ಸಂಘದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಚಾಲಕ ಅರವಿಂದ ಪೆರಿಗೇರಿ, ಕೋಶಾಧಿಕಾರಿ ಸಿಲ್ವೆಸ್ಟಾರ್ ಡಿಸೋಜಾ, ಉಪಾಧ್ಯಕ್ಷ ಸುನಿಲ್ ತ್ಯಾಗರಾಜ್, ಕೌಡಿಚಾರ್ ಘಟಕದ ಸದಸ್ಯರಾದ ನವೀನ ಕೌಡಿಚಾರ್, ಕಾವು ಜಂಕ್ಷನ್ ಘಟಕದ ಕಾರ್ಯದರ್ಶಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.