ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ನರಿಮೊಗರು ಆಯ್ಕೆಯಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವುರವರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ರಜಾಕ್ ಮುಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮುಲಾರ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ನಾಲ್ಕು ಬೂತ್‌ಗಳಿಂದ 14 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವಲಯ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾವ್ಯ ಸತೀಶ್ ಸಾಲಿಯಾನ್, ಎಸ್ಸಿ ಘಟಕದ ಅಧ್ಯಕ್ಷರಾಗಿ ಜಗದೀಶ್ ಬದಿಯಡ್ಕ, ಎಸ್ ಟಿ ಘಟಕದ ಅಧ್ಯಕ್ಷರಾಗಿ ಪದ್ಮನಾಭ ಕೊಡಂಕೇರಿ, ಕಿಸಾನ್ ಸಂಘದ ಅಧ್ಯಕ್ಷರಾಗಿ ಅಣ್ಣಿ ಪೂಜಾರಿ ಹಿಂದಾರು, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ವಲ್ಲಿ ಡಿಸೋಜ ಪುಳಿಕೆತ್ತಡಿ, ಪಂಚಾಯತ್‌ರಾಜ್ ಅಧ್ಯಕ್ಷರಾಗಿ ಸುನಂದ ಕೊರುಂಗು, ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಜಯ ಕುರೆಮಜಲು, ಸೋಶಿಯಲ್ ಮೀಡಿಯಾ ಅಶ್ರಫ್ ಮುಲಾರ್, ಸೇವಾದಳ ವಲಯ ಅಧ್ಯಕ್ಷರಾಗಿ ಆಸಿಫ್ ಕಂಪ, ಯೂತ್ ಕಾಂಗ್ರೆಸ್ ವಲಯದ ಅಧ್ಯಕ್ಷರಾಗಿ ಸಾದಿಕ್ ಪಾಪೆತ್ತಡ್ಕ, ಎನ್‌ಎಸ್‌ಯುಐ ಘಟಕದ ಅಧ್ಯಕ್ಷರಾಗಿ ಧೀಮಂತ್ ಬಂಗೇರ, ಪದವೀಧರ ಕ್ಷೇತ್ರ ವಲಯದ ಅಧ್ಯಕ್ಷರಾಗಿ ಅನುಜಿತ್ ಬಂಗೇರ, ಅಸಂಘಟಿತ ವಲಯದ ಅಧ್ಯಕ್ಷರಾಗಿ ಶೀನಪ್ಪ ಪೂಜಾರಿ ಕೊರಂಗು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ವಕ್ತಾರೆ ಚಂದ್ರ ಪ್ರಭ ಉಪಸ್ಥಿತರಿದ್ದರು.