ಪುತ್ತೂರು ವೃತ್ತಕ್ಕೆ ಸರ್ವಜ್ಞರ ಹೆಸರಿಡುವಂತೆ ಕುಲಾಲ ಸಮಾಜ ಸೇವಾ ಸಂಘದಿಂದ ಮನವಿ

0

ಪುತ್ತೂರು: ದೇಶದ ಪರಂಪರೆಯಲ್ಲಿ ಹಲವಾರು ದಾರ್ಶನಿಕರು ಬಂದು ಹೋಗಿದ್ದಾರೆ. ಕನ್ನಡದ ಕವಿಯಾಗಿ ಜನಮಾನಸದಲ್ಲಿರುವ ತನ್ನ ವಚನಗಳ ಮೂಲಕ ಸರ್ವರಿಗೂ ಸರ್ವಕಾಲಕ್ಕೂ ಅನ್ವಯವಾಗುವಂತೆ ಮಾರ್ಗದರ್ಶನ ನೀಡಿದ ದಾರ್ಶನಿಕ ಸರ್ವಜ್ಞ ಅವರ ಹೆಸರನ್ನು ಪುತ್ತೂರಿನ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡುವಂತೆ ಕುಲಾಲ ಸಮಾಜ ಸೇವಾ ಸಂಘದಿಂದ ನಗರಸಭೆಗೆ ಮನವಿ ಮಾಡಲಾಗಿದೆ.


ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನಿಯೋಗ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷ ಬಾಲಚಂದ್ರ ಅವರಿಗೆ ಮನವಿ ನೀಡಿದರು.

ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಎಮ್ ಶೇಷಪ್ಪ ಕುಲಾಲ್, ಕೋಶಾಧಿಕಾರಿ ಚಿತ್ರಲೇಖ ಬಲ್ನಾಡ್, ಜೊತೆ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಎನ್ , ಮಾಜಿ ಅಧ್ಯಕ್ಷರಾದ ಸತೀಶ್ ಉಡ್ಡಂಗಳ ಹಾಗೂ ಜನಾರ್ಧನ ಬಂಗೇರ ಸಿಟಿಗುಡ್ಡೆ, ಮಾಜಿ ಕಾರ್ಯದರ್ಶಿಗಳಾದ ಜನಾರ್ಧನ ಮೂಲ್ಯ ಸಾರ್ಯ, ಪಾಣಾಜೆ ಸಂಘದ ಮಾಜಿ ಅಧ್ಯಕ್ಷ ಜಯಾನಂದ, ಜಯರಾಮ್ ಕುಲಾಲ್ ಕೆ , ಧನ್ಯಶ್ರೀ ಬಲ್ನಾಡ್ ನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here