ಮೀರಾ ಸಾಹೇಬ್ ಕಡಬ ಅವರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ

0

ಕಡಬದಲ್ಲಿ ಲೋಕೋಪಯೋಗಿ ಇಲಾಖೆಯ ಉಪವಿಭಾಗ ಕಛೇರಿಯನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಕೆ

ಕಡಬ: ಕಡಬ ತಾಲೂಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಡಬ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಮುಖಂಡರು, ದ.ಕ ಜಿಲ್ಲಾ ಪರಿಷತ್ ಮಾಜಿ ಸದಸ್ಯರೂ ಆದ ಸಯ್ಯದ್ ಮೀರಾ ಸಾಹೇಬ್ ಕಡಬ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಕಡಬ ತಾಲೂಕು ಘೋಷಣೆಯಾಗಿ 7 ವರ್ಷ ಆದರೂ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿಲ್ಲ, ಹಾಗಾಗಿ ಅದರ ಬಗ್ಗೆ ವಿಶೇಷ ಗಮನ ಕೊಟ್ಟು ಪರಿಹಾರ ಒದಗಿಸಬೇಕು, ಅದೇ ರೀತಿ ಲೋಕೋಪಯೋಗಿ ಇಲಾಖೆಯ ಉಪವಿಭಾಗ ಕಛೇರಿಯನ್ನು ಕಡಬದಲ್ಲಿ ತೆರೆಯಬೇಕು ಎಂದು ಅವರು ಆಗ್ರಹಿಸಿ ಮನವಿ ಸಲ್ಲಿಸಿದರು.


ಕಡಬ-ಕೋಡಿಂಬಾಳ-ಪಂಜ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದರೂ ಹಲವಾರು ವರ್ಷಗಳಿಂದ ಡಾಮರೀಕರಣವಾಗದೇ ರಸ್ತೆಗಳು ಗುಂಡಿ ಬಿದ್ದಿದೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದರಿಂದ ತಕ್ಷಣ 1 ಕೋಟಿ ರೂ. ಅನುದಾನ ನೀಡಿ ಡಾಮರೀಕರಣಗೊಳಿಸಬೇಕು.

ಹೊಸದಾಗಿ ನಿರ್ಮಾಣಗೊಂಡ ಕಡಬ ತಾಲೂಕಿನ ಪಾಳೋಲಿ ಸೇತುವೆಯ ಪೂರ್ವ ಹಾಗೂ ಪಶ್ಚಿಮಕ್ಕೆ ರಸ್ತೆ ಅಗಲೀಕರಣಗೊಳಿಸದೇ ಇರುವುದರಿಂದ ಬಸ್ಸು ಸಂಚಾರ ಹಾಗೂ ಗಣ ವಾಹನಗಳು ಸಂಚರಿಸಲು ಅಸಾಧ್ಯವಾಗಿದೆ, ಸದ್ರಿ ರಸ್ತೆಯನ್ನು ಉನ್ನತ ದರ್ಜೆಗೆ ಏರಿಸಿ 3 ಕೋಟಿ ಹೆಚ್ಚಿನ ಅನುದಾನ ನೀಡುವಂತೆಯೂ ಕಡಬ ತಾಲೂಕಿಗೆ ಒಳಪಟ್ಟ ಎಡಮಂಗಳ ಗ್ರಾಮದ ಎಣ್ಣೂರು ಗ್ರಾಮ, ನಿಂತಿಕಲ್ಲು ಜಂಕ್ಷನ್‌ಗೆ ಸ್ಟೇಟ್ ಹೈವೆಗೆ ಸಂಪರ್ಕ ಒದಗಿಸುವಂತೆಯೂ ಆ ಭಾಗದ ಸುಮಾರು 8 ಗ್ರಾಮಗಳ ಜನರು ಕಡಬ ತಾಲೂಕಿನ ಸಂಪರ್ಕ ಇರುದರಿಂದ ಈ ರಸ್ತೆಯನ್ನ ತಕ್ಷಣ ಸಾರ್ವಜನಿಕರಿಗೆ ಬಿಟ್ಟುಕೊಡಲು ಕ್ರಮ ವಹಿಸಬೇಕು. ಕಡಬ ತಾಲೂಕಿಗೆ ಪ್ರವಾಸಿ ಮಂದಿರ ನಿರ್ಮಿಸಬೇಕು ಮತ್ತು ಅದಕ್ಕಾಗಿ ರೂ. ೩ ಕೋಟಿ ಅನುದಾನ ನೀಡಬೇಕು ಮುಂತಾದ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಸಯ್ಯದ್ ಮೀರಾ ಸಾಹೇಬ್ ಕಡಬ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here