ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಪುತ್ತೂರಿನ‌ ಶಾಸಕ ಅಶೋಕ್ ರೈ ಕ್ರಿಕೆಟ್ ಆಡುವಲ್ಲೂ ಎತ್ತಿದ ಕೈ – ಜಾರಿ ಬಿದ್ದಾದರೂ ರನ್ ಪಡೆಯುವ ದಾವಂತ

0

ಪುತ್ತೂರು: ತನ್ನ ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಪುತ್ತೂರಿನ‌ ಶಾಸಕ ಅಶೋಕ್ ರೈ ಕ್ರಿಕೆಟ್ ಆಡುವಲ್ಲೂ ಎತ್ತಿದ ಕೈ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಾರಿ ಬಿದ್ದಾದರೂ ರನ್ ಪಡೆಯುವ ದಾವಂತ ವಿಡಿಯೋ ಇದೀಗ ವೈರಲ್ ಆಗಿದೆ.


ಫೆ.22 ರಂದು ಪುತ್ತೂರಿನಲ್ಲಿ ಆಯೋಜಿಸಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಬಂಟರ ಸಂಘದಿಂದ ಆಯೋಜಿಸಿದ್ದ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟನೆ ನಡೆಸಿ ಬಳಿಕ ತಂಡವೊಂದರಲ್ಲಿ ಪ್ರದರ್ಶನ ಆಟಗಾರನಾಗಿ ಭಾಗವಹಿಸಿದ್ದಾರೆ. ಪುತ್ತೂರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಈ ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಶಾಸಕರು ಉತ್ತಮ ಪ್ರದರ್ಶನ ನೀಡಿದ್ದಾರೆ.


ಪಿಯುಸಿ ವಿದ್ಯಾಭ್ಯಾಸವನ್ನು ಪುತ್ತೂರು ಜ್ಯೂನಿಯರ್ ಕಾಲೇಜಿನಲ್ಲೇ ಪೂರೈಸಿದ ಅಶೋಕ್ ಕುಮಾರ್ ರೈ ಇದೇ ಮೈದಾನದಲ್ಲಿ ( ಈಗಿನ ತಾಲೂಕು ಮೈದಾನ) ಕ್ರಿಕೆಟ್ ಆಡಿದ್ದರು. ಇದೀಗ ಶಾಸಕರಾದ ಬಳಿಕ ಇದೇ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾರೆ. ರನ್ ಗಳಿಸಲು ಎದ್ದು ಬಿದ್ದು ಓಡಿದ ಶಾಸಕರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here