ಶ್ರೀ ನಾರಾಯಣಾರ್ಪಣಂ ಸಂಸ್ಮರಣ ಗ್ರಂಥ ಲೋಕಾರ್ಪಣೆ

0

ಪುತ್ತೂರು: ವ್ಯಕ್ತಿಯ ನಡೆ-ನುಡಿ, ಜೀವನ ಶೈಲಿ, ಸಮರ್ಪಣಾ ಭಾವ ಆತನನ್ನು ಇತಿಹಾಸ ಪುರುಷನನ್ನಾಗಿ ಮಾಡುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು. ಅವರು ಚಿಕ್ಕಬಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ನಡೆದ ಪುತ್ತೂರಿನ ಪ್ರಶಾಂತಿ ಸದ್ಭಾವನ ಟ್ರಸ್ಟಿನ ಸದ್ಭಾವನಾ ದಿನಾಚರಣೆ ಹಾಗೂ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ನ ಕೀರ್ತಿ ಶೇಷ ಬನ್ಯಂಗಳ ನಾರಾಯಣರಾವ್ ಅವರ ಸಂಸ್ಮರಣ ಗ್ರಂಥ “ಶ್ರೀ ನಾರಾಯಣಾರ್ಪಣಂ” ಕೃತಿಯನ್ನು ಲೋಕಾರ್ಪಣೆಗೊಳಿಸಿ ನಾರಾಯಣರಾಯರ ಆದರ್ಶ ಜೀವನದ ಕುರಿತು ಮಾತನಾಡಿದರು.

ವ್ಯಕ್ತಿಯ ಸದಾದರ್ಶ ಜೀವನ ತಲ ತಲಾಂತರಗಳಿಗೆ ಹರಿದು ಬರುವ ಪರಂಪರೆಯಾಗಿದೆ. ಪರಂಪರೆ ಮುಂದಿನ ಪೀಳಿಗೆಗೆ ಒಂದು ಆದರ್ಶ ಮಾದರಿ, ಮುದ್ದೇನಹಳ್ಳಿಯ ಪ್ರದೇಶಕ್ಕೆ ಶಿಕ್ಷಣ ಗಂಗೆಯನ್ನು ಪ್ರವಹಿಸಿದ ಶ್ರೇಯಸ್ಸು ಶ್ರೀ ನಾರಾಯಣರಾವ್ ರವರಿಗೆ ಸಲ್ಲುತ್ತದೆ ಎಂದರು.

ಶ್ರೀ ಸತ್ಯಸಾಯಿ ಲೋಕ ಸೇವಾ ಸಂಸ್ಥೆಗಳ ಸ್ಥಾಪಕ ಸದಸ್ಯ, ಶಿಕ್ಷಣ ಅದರ ಮೊದಲ ಮುಖ್ಯಶಿಕ್ಷಕ, ಪ್ರಥಮ ಪ್ರಾಂಶುಪಾಲರಾಗಿ, ಶಿಕ್ಷಣ ಭೀಷ್ಮನೆನಿಸಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದ ಅತಿ ವಿಶಿಷ್ಟ ವ್ಯಕ್ತಿತ್ವದ ಸಾಧಕ ಶೇಷ ಬನ್ಯಂಗಳ ನಾರಾಯಣ ರಾಯರು. ವಿಶ್ವ ಪ್ರಸಿದ್ದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಮಾರ್ಗದರ್ಶನದಲ್ಲಿ ಅದ್ಭುತ ಆಡಳಿತ ನೀಡಿದ ರಾಷ್ಟ್ರ ಶಿಕ್ಷಕ, ಶಿಕ್ಷಣ ತಜ್ಞ, ಏಷ್ಯಾದ ಖಂಡದ ಸಾಧಕ ಬನ್ಯಂಗಳ ನಾರಾಯಣ ರಾಯರು ವರ್ಷದ ಹಿಂದೆ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿದ್ದರು.

ಸುಮಾರು ಏಳು ದಶಕಗಳ ನಾರಾಯಣ ರಾಯರು ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ಪ್ರಸಾರಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದರು. ಜೀವಿತಾವಧಿಯಲ್ಲಿ ಅಪಾರ ಸಂಖ್ಯೆಯ ಶಿಷ್ಯರು ಮತ್ತು ಅಭಿಮಾನಿಗಳನ್ನು ಸಂಪಾದಿಸಿದ್ದರು. ಬದ್ಧತೆ, ಆದರ್ಶ ಮತ್ತು ಪಾರದರ್ಶಕತೆಯ ಪ್ರತೀಕವಾಗಿ ಬಾಳಿದ್ದರು. ಅವರು ಗತಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಸಹವರ್ತಿಗಳು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಒಂದುಗೂಡಿ ಸಂಸ್ಕರಣ ಗ್ರಂಥ ಶ್ರೀ ನಾರಾಯಣಾರ್ಪಣಂ” ಎಂಬ ಬೃಹತ್ ಕೃತಿಯನ್ನು ಹೊರ ತಂದಿದ್ದಾರೆ. ದಕ್ಷಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನ ಶ್ರೀ ಮಧುಸೂದನ್ ನಾಯಕ್ ನೇತೃತ್ವದ ಸಂಪಾದಕ ಮಂಡಳಿಯು ಈ ಗ್ರಂಥವನ್ನು ಸಂಪಾದಿಸಿ ಪ್ರಕಾಶಿಸಿದೆ. ಶ್ರೀ ರಾಜೀವ್ ಮಾಗಲ್, ಶ್ರೀ ಎಂ ಎಸ್ ಸತ್ಯನಾರಾಯಣ, ಶ್ರೀ ಗೋವಿಂದ ಭಟ್ ಸದಾಶಿವ ರಾವ್ ಸಹಿತ ಅನೇಕ ಮಂದಿ ಲೇಖಕರು, ದಾನಿಗಳು ಮತ್ತು ಅಭಿಮಾನಿಗಳು ಈ ಗ್ರಂಥದ ಸಾಕಾರ ರೂಪಕ್ಕೆ ಕಾರಣರಾಗಿದ್ದಾರೆ.

LEAVE A REPLY

Please enter your comment!
Please enter your name here