ಲಯನ್ಸ್ ಕ್ಲಬ್ ಜಿಲ್ಲಾ ಯೋಜನೆಯಲ್ಲಿ ವಿಕಲ ಚೇತನರಿಗೆ ಕೃತಕ ಅವಯವ ವಿತರಣೆ

0

ಮಂಗಳೂರು: ಮಂಗಳೂರು ಹಾಸನ, ಮಡಿಕೇರಿ ,ಚಿಕ್ಕಮಗಳೂರು ವ್ಯಾಪ್ತಿ ಹೊಂದಿರುವ ಲಯನ್ಸ್ ಜಿಲ್ಲೆ 317 ಡಿ ವತಿಯಿಂದ 2024 -25 ನೇ ಸಾಲಿನ ಲಯನ್ಸ್ ವರ್ಷದ ಯೋಜನೆ ಯಲ್ಲಿ ಅರ್ಹ 35 ವಿಕಲ ಚೇತನ ಕೃತಕ ಕಾಲುಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಲಯನ್ಸ್ ಲಿಂಬ್ ಸೆಂಟರ್ ನ ನಿರ್ದೇಶಕ ಡಾ ಯಂ .ಶಾಂತಾ ರಾಮ್ ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಗಳ ಕಾಲು ಕಳೆದುಕೊಂಡಿರುವ ವಿಕಲಚೇತನರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಏಪ್ರಿಲ್ ತಿಂಗಳಲ್ಲಿ ಈ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಯ್ಕೆಯಾದವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆಯ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ದ .ಕ, ಉಡುಪಿ ಅಪಘಾತ ವಲಯಗಳಾಗಿದ್ದು ನೂರಾರು ಮಂದಿ ಅಂಗಾಂಗಗಳನ್ನು ಕಳೆದುಕೊಳ್ಳುತ್ತಾರೆ.ಅಂತವರಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹಾಗೂ ಹಗುರವಾದ ಕೃತಕ ಕಾಲು ಜೋಡಣೆಯನ್ನು ಮಾಡಲಾಗುವುದು. ಆಸಕ್ತರು ಲಿಂಬ್ ಸೆಂಟರ್ ಮೆನೇಜರ್ ಸುರೇಶ್ ಶೆಟ್ಟಿ (8792394350) ಯವರನ್ನು ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ 317 ಡಿ ಗವರ್ನರ್ ಭಾರತಿ ಬಿ. ಎಂ.,ಜಿಲ್ಲಾ ಸೆಕ್ರಟರಿ ಗೀತಾ ರಾವ್ ಮಾಜಿ ಗವರ್ನರ್ ವಸಂತ ಶೆಟ್ಟಿ, ಆಲ್ವಿನ್ ನರೋನ ,ಪಿ .ಬಿ . ಹರೀಶ್ ರೈ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here