ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ನಿಡ್ಪಳ್ಳಿ: ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿ ಇವುಗಳ ಸಂಯೋಜನೆಯಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಎಫ್. ಎಲ್. ಎನ್ ಆಧಾರಿತ ಮಕ್ಕಳ ಕಲಿಕಾ ಹಬ್ಬ ಫೆ.21ರಂದು  ಬೆಟ್ಟಂಪಾಡಿ ಶಾಲೆಯಲ್ಲಿ  ಜರಗಿತು.

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಾ ಕುಮಾರಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಸೌಮ್ಯಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತರು, ಸಾಹಿತಿ, ನಿವೃತ್ತ ಶಿಕ್ಷಕರಾದ ನಾರಾಯಣ ರೈ ಕುಕ್ಕುವಳ್ಳಿ ಭಾಗವಹಿಸಿ ಮಕ್ಕಳ ಕಲಿಕಾ ಹಬ್ಬದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿವೃತ್ತ ಶಿಕ್ಷಕ ವಿಷ್ಣು ಭಟ್ ಕಕ್ಕೂರು, ಬೇಂಗಪದವು ಶಾಲಾ ಮುಖ್ಯಗುರು ಶಿವಕುಮಾರ ಭಟ್ ಮುಕ್ರಂಪಾಡಿ, ಹಮೀದ್ ಕೊಮ್ಮೆಮಾರ್, ನಿವೃತ್ತ ಕೆ.ಎಸ್.ಅರ್.ಟಿ.ಸಿ ಉದ್ಯೋಗಿ ಶೇಷಪ್ಪ ಪೂಜಾರಿ ರೆಂಜ, ಪ್ರಭಾಕರ ರೈ ಬಾಜುವಳ್ಳಿ, ಬಿ.ಎ. ಮಹಮ್ಮದ್ ಕುಂಞಿ ಕೂಟತ್ತಾನ, ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮ್ಯ, ಲಲಿತ ಮತ್ತು ಮಹಮ್ಮದ್ ಬೆಟ್ಟಂಪಾಡಿ ಉಪಸ್ಥಿತರಿದ್ದರು. 

ಬೆಟ್ಟಂಪಾಡಿ ಶಾಲಾ ವಿದ್ಯಾರ್ಥಿಗಳಾದ ಜೀವಿಕಾ, ತ್ರಿಶಾ ಹಾಗೂ ಪವಿತ್ರ  ಪ್ರಾರ್ಥಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮಮತಾ  ಸ್ವಾಗತಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಶಿಕ್ಷಕಿ ಪುಷ್ಪಾ ವಂದಿಸಿದರು. ಶಿಕ್ಷಕ ನಾಗೇಶ್ ಪಾಟಾಳಿ. ಕೆ ಕಾರ್ಯಕ್ರಮ ನಿರೂಪಿಸಿದರು.  ಬೆಟ್ಟಂಪಾಡಿ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ಒಂದರಿಂದ ಐದನೇ ತರಗತಿಯ ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳ ಕಲಿಕಾ ಹಬ್ಬ ಏಳು ಕಾರ್ನರ್ ಗಳಲ್ಲಿ ಚಟುವಟಿಕೆ ಆಧಾರಿತ ಸಂತಸದಾಯಕ ಕಲಿಕೆಯನ್ನು ನೀಡಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶಾಲಾಕ್ಷಿ ಪಾಣಾಜೆ, ಸ್ವರ್ಣಲತಾ ಒಡ್ಯ, ಸಾವಿತ್ರಿ ಮುಂಡೂರು-1, ಸುವರ್ಣಲತಾ ಸಾಜ, ಪಾರ್ವತಿ ಉಪ್ಪಳಿಗೆ, ಯಶೋಧ ಪೇರಲ್ತಡ್ಕ ಹಾಗೂ ನಾಗೇಶ್ ಸೂರಂಬೈಲು ಇವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು ಸಹಕರಿಸಿದರು. ಹಿರಿಯ ವಿದ್ಯಾರ್ಥಿಗಳು ಮಾಡಿದ ವರ್ಣರಂಜಿತ ಅಲಂಕಾರ, ತೋರಣ,ಸಿಂಗಾರಿ ಚೆಂಡೆ ಮೇಳ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

LEAVE A REPLY

Please enter your comment!
Please enter your name here