ಪುತ್ತೂರು:ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸೈಂಟ್ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಇನಾಸ್ ಗೊನ್ಸಾಲ್ವಿಸ್‌ರವರು ಫೆ.28 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಬನ್ನೂರು ಆನೆಮಜಲಿನ ಕೃಷಿಕ ದಂಪತಿಗಳಾದ ಬೆಲ್ಟರ್ ಗೊನ್ಸಾಲ್ವಿಸ್ ಮತ್ತು ಲಿಲ್ಲಿ ಲೋಬೊರವರ 7 ಗಂಡು, 1 ಹೆಣ್ಣು ಮಕ್ಕಳಲ್ಲಿ 6ನೆಯವರಾಗಿ ಜನಿಸಿದ ಇನಾಸ್ ಗೊನ್ಸಾಲ್ವಿಸ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಮಂಗಳೂರು ಸರಕಾರಿ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿಯನ್ನು ಪೂರೈಸಿರುತ್ತಾರೆ.
1989ರಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಗಣಿತ ಪದವೀಧರ ಸಹ ಶಿಕ್ಷಕರಾಗಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ ಇನಾಸ್ ಗೊನ್ಸಾಲ್ವಿಸ್‌ರವರು ಇದೇ ಶಾಲೆಯಲ್ಲಿ ಸೇವೆಗೈಯ್ದು ನಿವೃತ್ತ ಹೊಂದಿರುವರು.
ಶಿಕ್ಷಕ ಇನಾಸ್ ಗೊನ್ಸಾಲ್ವಿಸ್‌ರವರು ಪುತ್ತೂರಿನ ಡೊನ್ ಬೊಸ್ಕೊ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಸಕ್ರಿಯ ಸದಸ್ಯರಾಗಿ, ಬನ್ನೂರು ಸಂತ ಅಂತೋನಿ ಚರ್ಚ್‌ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಶಿಕ್ಷಕ ಇನಾಸ್ ಗೊನ್ಸಾಲ್ವಿಸ್‌ರವರು ಪತ್ನಿ ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಕಾರ್ಮಿನ್ ಪಾಯಿಸ್, ಪುತ್ರ ಬಿಇ ಪದವೀಧರರಾಗಿದ್ದು ಬೆಂಗಳೂರಿನ ಸಾಪ್ಟ್‌ವೇರ್ ಡೆವಲಪರ್ ಎಕ್ಸ್ಂಜರ್ ಆಗಿರುವ ಕೆವಿನ್ ಗೊನ್ಸಾಲ್ವಿಸ್, ಪುತ್ರಿ ಬಿಇ ಪದವೀಧರೆ, ಬೆಂಗಳೂರಿನ ಕ್ಯಾಪ್ ಜೆಮಿನಿಯಲ್ಲಿ ಸಾಪ್ಟ್‌ವೇರ್ ಡೆವಲಪರ್ ಆಗಿರುವ ಕ್ವೀನಿ ಗೊನ್ಸಾಲಿಸ್, ಸೊಸೆ ಎಂ.ಟೆಕ್ ಪದವೀಧರೆ, ಬೆಂಗಳೂರಿನ ಮೈಂಡ್ ಟ್ರೀ ಸಂಸ್ಥೆಯಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಡಿಲಿಮ ವೇಗಸ್‌ರವರೊಂದಿಗೆ ಬನ್ನೂರಿನ ಆನೆಮಜಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.