ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎ.ಎಸ್.ಐ ರಾಮಪ್ಪ ಕೆ ಅವರು ಫೆ.28 ರಂದು ನಿವೃತ್ತಿ ಹೊಂದಲಿದ್ದಾರೆ.
ಕೊಡಿಪ್ಪಾಡಿ ಕಜೆ ನಿವಾಸಿಯಾಗಿರುವ ರಾಮಪ್ಪ ಕೆ ಅವರು 31 ವರ್ಷ 8 ತಿಂಗಳು ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕುಂದಾಪುರ ಶಂಕರನಾರಾಯಣ, ಮಂಗಳೂರು ಪಾಂಡೇಶ್ವರ, ಬಂದರು, ವಿಟ್ಲ, ದ.ಕ ಜಿಲ್ಲಾ ಎಸ್ಪಿ ಕಚೇರಿ, ವಿಟ್ಲ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಆರು ವರ್ಷಗಳಿಂದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೀಗ ಅವರು ನಿವೃತ್ತಿ ಹೊಂದಲಿದ್ದಾರೆ. ಇವರ ಪತ್ನಿ ಪುಷ್ಪಲತಾ ತೆಂಕಿಲ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಪುತ್ರ ಪ್ರಖ್ಯಾತ್ ಇಂಜಿನಿಯರಿಂಗ್ ಮಾಡಿದ್ದಾರೆ. ಪುತ್ರಿ ಪ್ರಗತಿ ಬಿ ವಿವೇಕಾನಂದ ಕಾಲೇಜಿನಲ್ಲಿ ಬಿ ಪಾರ್ಮಾ ದ್ವಿತೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.