ಬಡಗನ್ನೂರು: ಬಡಗನ್ನೂರು ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮವು ಮಾ.1 ರಂದು ನಡೆಯಿತು.
ಈಶ್ವರಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ಚಂದ್ರಶೇಖರ ಇವರು ಮಕ್ಕಳಿಗೆ ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯಿದೆ ಹಾಗೂ ಮಾದಕ ವ್ಯಸನದ ಕುರಿತು ಮಾಹಿತಿಯನ್ನು ನೀಡಿ, ಸಮಾಜದ ಉತ್ತಮ ಪ್ರಜೆಗಳಾಗಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.
ಬೀಟ್ ಪೋಲೀಸ್ ಅಧಿಕಾರಿ ಆಕಾಶ್ ರವರು ರಸ್ತೆ ಸುರಕ್ಷತೆ, ಮತ್ತು ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಮತ್ತು ಸೈಬರ್ ಕ್ರೈಮ್ ಹಾಗೂ, ಮಕ್ಕಳ ಸಹಾಯವಾಣಿ ಬಳಕೆ ಕುರಿತು ಮಾಹಿತಿ ನೀಡಿದರು. ಪೋಲೀಸ್ ಕಾನ್ಸ್ ಟೇಬಲ್ ಬಸವರಾಜ್ ರವರು ಶಿಸ್ತು ಮತ್ತು ಸುರಕ್ಷತೆ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದ ಅಂಶ. ಅದನ್ನು ಪಾಲಿಸುವಂತೆ ಹೇಳಿದರು
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಉಪಸ್ಥಿತರಿದ್ದು, ರಮ್ಯಾ ಎಸ್ ಸ್ವಾಗತಿಸಿ ಮುಖ್ಯ ಗುರುಗಳಾದ ಹರಿಣಾಕ್ಷಿ ಎ ವಂದಿಸಿದರು.