ಪುತ್ತೂರು: ಇತ್ತೀಚೆಗೆ ನಿಧನರಾದ ಮೊಡಪ್ಪಾಡಿಗುತ್ತು ಕುಟುಂಬದ ಯಜಮಾನ ತಿಮ್ಮಪ್ಪ ರೈ ಸೂಂತೋಡು, ನಾರಾಯಣ ರೈ ಹಾಗೂ ಸೀತಾ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ, ವೈಕುಂಠ ಸಮಾರಾಧನೆ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಾ.1ರಂದು ನಡೆಯಿತು.
ಕೃಷಿಕ ಪ್ರಭಾಕರ ರೈ ನಡುಮೊಗರುಗುತ್ತು ನುಡಿನಮನ ಸಲ್ಲಿಸಿದರು. ಕುಟುಂಬದ ಯಜಮಾನ ಜತ್ತಪ್ಪ ರೈ, ತಿಮ್ಮಪ್ಪ ರೈಯವರ ಪತ್ನಿ ಲಲಿತಾ ಟಿ. ರೈ, ಪುತ್ರರಾದ ಶ್ರೀಧರ ರೈ, ಸುಧಾಕರ ರೈ, ಪುತ್ರಿಯರಾದ ಪ್ರಭಾವತಿ, ವಿನೋದ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ನಾರಾಯಣ ರೈಯವರ ಪತ್ನಿ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಸೀತಾ ಶೆಟ್ಟಿಯವರ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮೊಡಪ್ಪಾಡಿಗುತ್ತು ಕುಟುಂಬಸ್ಥರು, ಬಂಧುಗಳು ಹಾಗೂ ಹಲವಾರು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ, ಪುಷ್ಪಾರ್ಚನೆ
ಅಗಲಿದ ಮೊಡಪ್ಪಾಡಿಗುತ್ತು ಕುಟುಂಬದ ತಿಮ್ಮಪ್ಪ ರೈ, ನಾರಾಯಣ ರೈ, ಮತ್ತು ಸೀತಾ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.