ಪುತ್ತೂರು ತಾಲೂಕು ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣೆ -ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿಗಳಾದ ಗಾಯತ್ರಿ ಅವರ ನಿರ್ದೇಶನದಂತೆ  ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರಿನ ಉಪನಿರ್ದೇಶಕರು (ಆಡಳಿತ) ಇವರು ಪುತ್ತೂರು ತಾಲೂಕು ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣಾಧಿಕಾರಿಗಳಾಗಿ ಜಲಜಾಕ್ಷಿ  ಅವರನ್ನು ನೇಮಿಸಿದ್ದರು.

ಮಾ.2ರಂದು ನಡೆದ ಚುನಾವಣೆಯಲ್ಲಿ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. 

ಅಧ್ಯಕ್ಷರಾಗಿ  ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ, ಉಪಾಧ್ಯಕ್ಷರಾಗಿ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಗ್ರೇಡ್ 1 ದೈಹಿಕ ಶಿಕ್ಷಕ ರಾಮಕೃಷ್ಣ. ಎ 

ಪ್ರಧಾನ ಕಾರ್ಯದರ್ಶಿಯಾಗಿ ಪಡುಬೆಟ್ಟು ಸ.ಪ್ರೌಢಶಾಲಾ  ಗ್ರೇಡ್ 1ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪಜಿ,,ಜಂಟಿ ಕಾರ್ಯದರ್ಶಿಯಾಗಿ ಶಿವರಾಮ ಕಾರಂತ ಪ್ರೌಢಶಾಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕಿ ಪ್ರಮೀಳಾ ಬಿ. ಕೆ ,ಖಜಾಂಜಿಯಾಗಿ ಉಪ್ಪಿನಂಗಡಿ  ಸ. ಸಂಯುಕ್ತ ಪ. ಪೂ ಕಾಲೇಜಿನ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕಿ ಎಲಿಜಬೆತ್ , ಸಂಘಟನಾ ಕಾರ್ಯದರ್ಶಿಯಾಗಿ ಕಡಬ ಸ.ಪ.ಪೂ.ಕಾಲೇಜಿನ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ಟಿ. ಎಸ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here