ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.5ರಂದು ಷಷ್ಠಿ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಅರ್ಚಕ ಪ್ರವೀಣ್ ಶಂಕರ್ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.ಡಾ.ಶುಭ್‌ದೀಪ್ ರೈ ಕೋಲ್ಪೆಗುತ್ತು ಸೇವಾಕರ್ತರಾಗಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ನಾರಾಯಣ ರೈ ಮೊದೆಲ್ಕಾಡಿ, ಮೋಹನ್ ದಾಸ್ ರೈ ,ಕಿಶೋರ್ ಕುಮಾರ್ ರೈ ನಳೀಲು,ಅರುಣ್ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು ,ಬಾರ್ಯ ಶ್ರೀಮಹಾವಿಷ್ಣು ದೇವಸ್ಥಾನ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು
ಪ್ರತೀ ತಿಂಗಳ ಷಷ್ಠಿಯಂದು ಷಷ್ಠಿ ಪೂಜೆ ,ಅನ್ನಸಂತರ್ಪಣೆ
ದೇವಸ್ಥಾನದಲ್ಲಿ ಪ್ರತೀ ತಿಂಗಳ ಶುದ್ದ ಷಷ್ಟಿಯಂದು ಮಧ್ಯಾಹ್ನ ಷಷ್ಟಿ ಪೂಜೆ, ಅನ್ನಸಂತರ್ಪಣೆ ಪ್ರತೀ ತಿಂಗಳ ಸಂಕಷ್ಟಿಯಂದು ಮಹಾಗಣಪತಿ ಹೋಮ, ಪ್ರತೀ ಸಂಕ್ರಮಣದಂದು ರಾತ್ರಿ ರಂಗಪೂಜೆ ನಡೆಯಲಿದೆ.
ಅಲ್ಲದೇ ಭಕ್ತಾದಿಗಳು ಇಚ್ಚಿಸಿದ ದಿನಗಳಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ,ಶ್ರೀ ಸತ್ಯನಾರಾಯಣ ಪೂಜೆ,ಆಶ್ಲೇಷ ಬಲಿ, ಶ್ರೀ ಶನೈಶ್ಚರ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ.ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.