ಬಡಗನ್ನೂರು ಗ್ರಾ.ಪಂ. ನ 2024-2025ನೇ ಸಾಲಿನ ಎರಡನೇ ಹಂತದ ವಾರ್ಡುಸಭೆ ಮತ್ತು ಗ್ರಾಮ ಸಭೆ

0

ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತಿಗೊಳಪಟ್ಟ ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮಗಳ ವಾರ್ಡು ಸಭೆಯನ್ನು ಮಾ.11 ಮತ್ತು 13  ಮತ್ತು 14 ರಂದು ಹಾಗೂ  ಗ್ರಾಮಸಭೆಯನ್ನು ಮಾ. 19 ರಂದು ಕರೆಯಲಾಗಿದ್ದು ಆಯಾ ವಾರ್ಡಿಗೆ ಸಂಬಂಧಿಸಿದ ಗ್ರಾಮಸ್ಥರು ಈ ಸಭೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ  ಗ್ರಾ.ಪಂ.ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಾರ್ಡುಸಭೆ :

ಬಡಗನ್ನೂರು 3  ಮತ್ತು ಪಡುವನ್ನೂರು 3 ವಾರ್ಡ್ ನ ವಾರ್ಡ್ ಸಭೆಯನ್ನು ಮಾ.11ರಂದು ಪೂರ್ವಾಹ್ನ ಗಂ 11 ಕ್ಕೆ ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಹಾಗೂ ಬಡಗನ್ನೂರು 1 ಮತ್ತು 2ನೇ ವಾರ್ಡ್ ನ ವಾರ್ಡ್ ಸಭೆಯನ್ನು ತುಳಸಿಯಡ್ಕ ಅಂಗನವಾಡಿ ಕೇಂದ್ರದಲ್ಲಿ  ನಡೆಯಲಿದೆ.

ಪಡುವನ್ನೂರು 2 ನೇ ವಾರ್ಡ್ ನ  ವಾರ್ಡ್ ಸಭೆಯನ್ನು ಮಾ.13 ರಂದು  ಪೂರ್ವಾಹ್ನ ಗಂ 10.30 ಕ್ಕೆ  ಸುಳ್ಯಪದವು ಅಂಗನವಾಡಿ ಕೇಂದ್ರದಲ್ಲಿ ಮತ್ತು  ಪಡುವನ್ನೂರು 1 ವಾರ್ಡ್ ನ  ವಾರ್ಡ್ ಸಭೆಯನ್ನು  ಮಾ.14 ರಂದು ಪೂರ್ವಾಹ್ನ ಗಂ 11ಕ್ಕೆ ಪಡುಮಲೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಗ್ರಾಮ ಸಭೆ :

 ಬಡಗನ್ನೂರು ಗ್ರಾಮ ಪಂಚಾಯತಿಗೊಳಪಟ್ಟ ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮಗಳ ಗ್ರಾಮ ಸಭೆಯು  ಮಾ.19 ರಂದು  ಪೂರ್ವಾಹ್ನ ಗಂ 11 ಕ್ಕೆ   ಬಡಗನ್ನೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿರುವುದು.

ಮಾರ್ಗದರ್ಶಿ ಅಧಿಕಾರಿ : ಪುತ್ತೂರು ತಾಲೂಕು,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,  ಕಲ್ಯಾಣಾಧಿಕಾರಿ, ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here