ಕೆಯ್ಯೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ವಿಧಾತ್ರಿ ಮಹಿಳಾ ಮಂಡಳಿ ಕೆಯ್ಯೂರು ,ಇವರ ವತಿಯಿಂದ ಮಹಿಳಾ ದಿನವನ್ನು ಆಚರಿಸಲಾಯಿತು.
ಮಂಡಳಿಯ ಸದಸ್ಯರು ಮತ್ತು ಪಾಲ್ಗೊಂಡ ಮಹಿಳಾ ಮಣಿಯರು ಮತ್ತು ಮಕ್ಕಳು ಒಟ್ಟು ಸೇರಿ ಹಾಡು,ಮುಂತಾದ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಕ್ಕಳು ಕೂಡಾ ಭಾಗವಹಿಸಿದ್ದರು .
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ, ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ಕೆಯ್ಯೂರು ಗ್ರಾಮ ಪಂಚಾಯತ್ ಹಾಲಿ ಉಪಾಧ್ಯಕ್ಷೆ ಸುಮಿತ್ರಾ ದಿವಾಕರ, ಸದಸ್ಯೆ ಸುಭಾಷಿನಿ ಸಣಂಗಳ , ಶಿಕ್ಷಕಿಯರಾದ ಸೌಮ್ಯ ರೈ, ಅರ್ಚನಾ ರೈ, ಜ್ಯೋತಿ, ದೃತಿ ರೈ, ಹರ್ಷಿತಾ, ಕಾವ್ಯ ರೈ, ಹಸ್ತಾಕ್ಷಿ, ವಿ.ಎಲ್.ಎ ರಶ್ಮಿತ ಮತ್ತು ಸದಸ್ಯೆಯರಾದ ಲಾವಣ್ಯ ರೈ, ಸಂಗೀತ , ಚಿತ್ರ ರೈ ಸಣಂಗಳ ,ಲತಾ,ರೂಪ ರೈ, ಮೋಹಿನಿ ರೈ ಮೊದಲಾದವರು ಭಾಗವಹಿಸಿದ್ದರು. ಭವಾನಿ ಚಿದಾನಂದರವರು ಮತ್ತು ರೂಪ ರೈ ಯವರು ಮಹಿಳಾ ದಿನದ ಮಹತ್ವನ್ನು ವಿವರಿಸಿದರು. ಬಂದವರೆಲ್ಲರೂ ಮಂಡಳಿಗೆ ಶುಭ ಕೋರಿದರು. ದೃತಿ ರೈ ಕಾರ್ಯಕ್ರಮ ನಿರೂಪಿಸಿ,ಅರ್ಚನಾ ರೈ ಸ್ವಾಗತಿಸಿ, ಜ್ಯೋತಿಯವರು ವಂದನಾರ್ಪಣೆಗೈದರು .