ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ – ಭಾಗೀರಥಿ ಮುರುಳ್ಯ
ಸವಣೂರು: ಪೆರುವಾಜೆ ,ಪಾಲ್ತಾಡಿ,ಕೊಳ್ತಿಗೆ ಗ್ರಾಮಗಳಿಗೆ ಸಂಬಂಧಪಟ್ಟಿರುವ ಪಾಲ್ತಾಡು ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯದ ಸಂಪರ್ಕ ರಸ್ತೆಯ ಅಭಿವೃದ್ದಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಅನುದಾನ ನೀಡಿದ್ದು, ಕಾಂಕ್ರೀಟಿಕೃತ ರಸ್ತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಮಾ.9ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಗುಳಿಗ ಸಾನಿಧ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಾಸಕಿಯಾಗುವ ಮುನ್ನವೂ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದೆ.ಅದರಂತೆ ಕಳೆದ ವರ್ಷ ಶಾಸಕಿಯಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ.ಕಳೆದ ಬಾರಿ ರಸ್ತೆಯ ಅಭಿವೃದ್ಧಿಗೆ ಸಮಿತಿಯವರು ಮನವಿ ಮಾಡಿದ್ದರು.ಅದರಂತೆ ಈ ಬಾರಿ ರಸ್ತೆ ಅಭಿವೃದ್ಧಿಯಾಗಿದೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ವಿನೋದಾ ರೈ, ಕೊಳ್ತಿಗೆ ಗ್ರಾ.ಪಂ.ಮಾಜಿ ಸದಸ್ಯರಾದ ಸುನೀಲ್ ರೈ ಪಾಲ್ತಾಡು, ಸವಣೂರು ಗ್ರಾ.ಪಂ.ಮಾಜಿ ಸದಸ್ಯರಾದ ಸುಧಾಮ ಮಣಿಯಾಣಿ, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಕೊಂಡೆಪ್ಪಾಡಿ,ಬೂತ್ ಅಧ್ಯಕ್ಷ ಮಧುಸೂದನ್ ಬಜತ್ತನೆ ,ಕಾರ್ಯದರ್ಶಿ ಶಶಿಕುಮಾರ್, ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಂಜಪ್ಪ ರೈ, ಅಧ್ಯಕ್ಷರಾದ ಡಾ.ಹರಿಕೃಷ್ಣ ರೈ ಜಿ.ಎನ್., ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷರಾದ ಸುಂದರ ನಾಯ್ಕ ನಾಗನಮಜಲು, ಜತೆ ಕಾರ್ಯದರ್ಶಿ ದಿನೇಶ್ ಶಾಂತಿಮೂಲೆ, ಕೋಶಾಧಿಕಾರಿ ಬಾಬು ಶಾಂತಿಮೂಲೆ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.