ಕಡಬ: ಕಾರು ಡಿಕ್ಕಿ-ರಸ್ತೆ ದಾಟುತ್ತಿದ್ದ ಬಸ್ ಚಾಲಕನಿಗೆ ಗಾಯ

0

ಪುತ್ತೂರು: ಬಸ್ಸು ನಿಲ್ಲಿಸಿ ವಾಶ್‌ರೂಮ್‌ಗೆಂದು ರಸ್ತೆದಾಟಿ ಹೋಗುತ್ತಿದ್ದ ಚಾಲಕನಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಇತ್ತೀಚೆಗೆ ಕಡಬದಲ್ಲಿ ನಡೆದಿದೆ.


ರಾಮಚಂದ್ರ ನಾಯ್ಕ್ ಗಾಯಗೊಂಡಿರುವ ಬಸ್‌ಚಾಲಕ. ಇವರು ಮಾ.6ರಂದು ಪುತ್ತೂರು-ಕಡಬ-ಸುಳ್ಯಕ್ಕೆ ಸಂಚಾರ ಮಾಡುವ ಕೆಎಸ್‌ಆರ್‌ಟಿಸಿ ಬಸ್ಸ್‌ನಲ್ಲಿ ಚಾಲಕನಾಗಿ ಬಂದಿದ್ದು ಬೆಳಿಗ್ಗೆ 9.50ಕ್ಕೆ ಕಡಬದಲ್ಲಿ ಬಸ್‌ನಿಲ್ಲಿಸಿ ಹೋಟೇಲ್‌ಗೆ ಹೋಗಿ ಅಲ್ಲಿಂದ ವಾಶ್ ರೂಮ್‌ಗೆಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆ ದಾಟಿ ಹೋಗುತ್ತಿರುವ ಸಮಯ ಕಡಬ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಆಸ್ಪಾಕ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ20, ಎನ್ 8703 ನೋಂದಣಿ ನಂಬರ್‌ನ ಕಾರು ಡಿಕ್ಕಿಯಾಗಿದೆ.

ಡಿಕ್ಕಿಯಾದ ಪರಿಣಾಮ ರಾಮಚಂದ್ರರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ರಾಮಚಂದ್ರ ನಾಯ್ಕ್‌ರವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕ ಮುನೀಶ್ವರನ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here