ಪಾಪೆಮಜಲು ಬೇಂಗತ್ತಡ್ಕ ಬಹ್ಮಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರು : ಅರಿಯಡ್ಕ ಗ್ರಾಮದ ಪಾಪೆಮಜಲು ಬೇಂಗತ್ತಡ್ಕ  ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮಾ.22 ರಂದು ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಾ.10 ರಂದು ಗರಡಿ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಬೈದರ್ಕಳ ಸನ್ನಿಧಿಯಲ್ಲಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕ್ಷೇತ್ರದ ಆಡಳಿತ ಮೂಕ್ತೇಸರ ಕೇಶವ ಎಂ.ಎಸ್ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಉಪಾಧ್ಯಕ್ಷ ರಾಘವ ಪೂಜಾರಿ ಮರತ್ತಮೂಲೆ,  ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕರುಣಾಕರ ಪೆರ್ವೋಡಿ, ಕೋಶಾಧಿಕಾರಿ  ಕೃತಿಕಾ ಪೆರ್ವೋಡಿ, ಸದಸ್ಯರಾದ ಪ್ರದೀಪ್  ಶಾಂತಿವನ,  ಕಾರ್ತಿಕ್ ಪೆರ್ವೋಡಿ, ಅಶೋಕ್ ಕುಮಾರ್ ಬೊಳ್ಲಾಡಿ, ದಿನೇಶ್ ಕುಮಾರ್ ಮರತ್ತಮೂಲೆ ಗೋಪಾಲ ಮರತ್ತಮೂಲೆ  ಸ್ಥಳೀಯರಾದ ಸುನೀಲ್  ಕುಮಾರ್  ಗುಂಡ್ಯಡ್ಕ , ವಿಕ್ರತಾ  ಪುಷ್ಪಲತಾ ಮರತ್ತಮೂಲೆ ವೆಂಕಪ್ಪ ನಾಯ್ಕ ಪಾಪೆಮಜಲು ಜಗದೀಶ್,ಬೇಂಗತ್ತಡ್ಕ, ಜಯರಾಮ, ಸಂಕಪ್ಪ ಪೂಜಾರಿ ಚೆನ್ನಪ್ಪ ಪೂಜಾರಿ, ರವಿ, ಹರೀಶ್ ಅಚಾರ್ಯ ಕುರ್ಚಿಲ, ಸಂಜೀವ ನೆಕ್ಕರೆ, ಹರಿಕೃಷ್ಣ  ಪಾದಲಾಡಿ, ಸುಧೀರ್ ಕುತ್ಯಾಡಿ ಹಾಗೂ ಊರಿನವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here