ಅರಿಯಡ್ಕ: ಅರಿಯಡ್ಕ ಗ್ರಾಮದ ಜಾರತ್ತಾರು ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ಹಾಗೂ ಸಹಪರಿವಾರ ದೈವಗಳ ದೈವ ಸ್ಥಾನ ಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಾರಿಪೂಜೆಯು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ಮಾ. 15ರಿಂದ 17ರ ತನಕ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ವಠಾರದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಧಾರ್ಮಿಕ ಮುಖಂಡ ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿ, ಇಲ್ಲಿನ ಜೀರ್ಣೋದ್ಧಾರ ಕಾರ್ಯ ಜವಾಬ್ದಾರಿಯುತವಾಗಿ ನಡೆದಿದೆ. ದೇವರ ದೈವ ಅನುಗ್ರಹ ನಂಬಿಕೆ ಮೇಲೆ ಕೆಲಸ ನಡೆದಿದೆ, ಹಿರಿಯ ಆರಾಧನೆಗಳು, ಆಚರಣೆಗಳು ಬೇರೆ ಕಾರಣದಿಂದ ನಿಂತು ಹೋಗಿವೆ. ದೈವ ದೇವರ ಜೀರ್ಣೋದ್ದಾರ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಯುವಜನತೆ ಪಾಲ್ಗೊಳ್ಳುತ್ತಿರುವುದು ಧಾರ್ಮಿಕ ಕ್ಷೇತ್ರಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ. ಇಲ್ಲಿ ಕೂಡ ಜೀರ್ಣೋದ್ಧಾರ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿದೆ.ಇಲ್ಲಿನ ಭಕ್ತ ಜನರಿಗೆ ಅನುಕೂಲಗಳು ಒದಗಿ ಬಂದು ಭಯ ಭಕ್ತಿ ಕೇಂದ್ರವಾಗಿ ಮೂಡಿ ಬಂದಿರುವುದು ಅಚ್ಚರಿ ಸಂಗತಿಯಾಗಿದೆ. ಇಲ್ಲಿನ ಯುವಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ರೀತಿ ಸಹಕಾರ ನೀಡುತ್ತೇನೆ. ದೈವ ಪ್ರೇರಣೆಯಂತೆ ಎಲ್ಲ ಕಾರ್ಯ ಗಳು ಸುಗಮವಾಗಿ ನಡೆಯಲಿ ಎಂದು ಹೇಳಿದರು.
ಗೌರವ ಸಲಹೆಗಾರರಾದ ಶ್ರೀರಾಮ್ ಪಕ್ಕಳ ಅರಿಯಡ್ಕ ಮಾತನಾಡಿ, ಇಲ್ಲಿ ಜೀರ್ಣೋದ್ಧಾರ ಕಾರ್ಯಗಳು ಅಚ್ಚು ಕಟ್ಟಾಗಿ ನಡೆದಿದೆ. ಹಿರಿಯರು ಯುವಕರು ಸೇರಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇವಿ ಅನುಗ್ರಹದಿಂದ ಎಲ್ಲರ ಸಹಕಾರದಿಂದ ಮುಂದೆ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಹಿರಿಯರು ಆರೋಗ್ಯ, ಇನ್ನಿತರ ಸಮಸ್ಯೆ ಗಳು ಬಂದಾಗ ಊರಿನವರು ದೈವಗಳ ಮೊರೆಹೋಗಿ ಹರಕೆ ಸಂದಾಯ ಮಾಡಿದಾಗ ಸಮಸ್ಯೆಗಳು ದೂರವಾಗುತ್ತಿದೆ ಎಂಬ ನಂಬಿಕೆ ಮೇಲೆ ಅಭಿವೃದ್ಧಿ ಕಾರ್ಯ ನಡೆದಿದೆ. ಪುತ್ತೂರು ಶಾಸಕರಾದ ಅಶೋಕ್ ರೈ ರಸ್ತೆ ಕಾಮಗಾರಿ ರೂ.5ಲಕ್ಷ, ಮುಜರಾಯಿ ಇಲಾಖೆಯಿಂದ 5 ಲಕ್ಷ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ , ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು , ಪ್ರಧಾನ ಅರ್ಚಕ ನಾರಾಯಣ ಜಾರತ್ತಾರು, ಕಾರ್ಯಾಧ್ಯಕ್ಷ ಸುರೇಶ ಪಿ ಸಂಪ್ಯ,ಸದಸ್ಯರಾದ ಪೂವಪ್ಪ ರೈ ಪನೇಕ್ಕಳ, ಗುರುವಪ್ಪ ಜಾರತ್ತಾರು, ಕುಂಜಿರ ಜಾರತ್ತಾರು, ಸಮಿತಿಗಳ ಪದಾಧಿಕಾರಿಗಳಾದ ಪ್ರವೀಣ್ ರೈ ಪನೇಕ್ಕಳ, ಅಣ್ಣು ಜಾರತ್ತಾರು, ಕೇಶವ ಜಾರತ್ತಾರು, ಚಂದ್ರಹಾಸ್ ಜಾರತ್ತಾರು, ವೇಣುಗೋಪಾಲ್ ಜಾರತ್ತಾರು, ಸಂದೀಪ್ ಜಾರತ್ತಾರು, ಅಕ್ಷಯ್ ಜಾರತ್ತಾರು, ಅನಿತಾ ಜಾರತ್ತಾರು, ಶಶಿ ಕುಮಾರ್ ಜಾರತ್ತಾರು, ಗುರು ಪ್ರಸಾದ್ ಪುಣಚ, ಗಿರಿಜಾ ಜಾರತ್ತಾರು, ಸುಶೀಲ ಜಾರತ್ತಾರು, ಪದ್ಮಾವತಿ ಜಾರತ್ತಾರು, ಲೀಲಾ ಜಾರತ್ತಾರು, ರಾಧಾ ಕುರಿಕ್ಕಾರ, ಗೀತಾ ಶೇಖಮಲೆ, ತಿಮ್ಮಪ್ಪ ಜಾರತ್ತಾರು, ಕರುಣಾಕರ ಜಾರತ್ತಾರು, ಪ್ರಮೋದ ಜಾರತ್ತಾರು, ಪ್ರವೀಣ್ ಜಾರತ್ತಾರು, ಧರ್ಣಪ್ಪ ಜಾರತ್ತಾರು, ಲಕ್ಷ್ಮಣಜಾರತ್ತಾರು, ನವೀನಜಾರತ್ತಾರು, ಭವಿತ್ ಜಾರತ್ತಾರು, ಸುಮಂತ್ ಜಾರತ್ತಾರು, ರಾಜುಜಾರತ್ತಾರು, ರಮೇಶ ಜಾರತ್ತಾರು, ಅವಿಶ್ ಕುಮಾರ್ ಜಾರತ್ತಾರು, ಅನಿಲ್ ಜಾರತ್ತಾರು, ವಸಂತ ಜಾರತ್ತಾರು, ಸುಶಾಂತ್ ಜಾರತ್ತಾರು, ಮಾಧವ ಜಾರತ್ತಾರು ಮುಂತಾದವರು ಉಪಸ್ಥಿತರಿದ್ದರು.