ಅಧ್ಯಕ್ಷ ಚಿದಾನಂದ ಸುವರ್ಣ, ಉಪಾಧ್ಯಕ್ಷ ಜಗನ್ನಾಥ ರೈ
ಪುತ್ತೂರು:ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಚಿದಾನಂದ ಸುವರ್ಣ, ಉಪಾಧ್ಯಕ್ಷರಾಗಿ ಜಗನ್ನಾಥ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಎಲ್ಲಾ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮೀಸಲು ಸ್ಥಾನದಿಂದ ಪುರುಷೋತ್ತಮ ನಾಯಕ್ ನೀರುಕುಕ್ಕು, ರಾಧಾಕೃಷ್ಣ ಜಿ.ಗೆಣಸಿನಕುಮೇರು, ಲೋಕಯ್ಯ ನಾಯ್ಕ ಕುಂಜೂರುಪಂಜ, ಜಿ.ಮಹಾಬಲ ರೈ ಗೆಣಸಿನಕುಮೇರು, ಜಿ.ಕೃಷ್ಣಪ್ಪ ನಾಯ್ಕ ಗೆಣಸಿನಕುಮೇರು, ವಿಠಲ ಎಂ ಗೆಣಸಿನಕುಮೇರು, ಬಾಲಕೃಷ್ಣ ಪೂಜಾರಿ ಕುಂಜೂರುಪಂಜ, ಹಿಂದುಳಿದ ವರ್ಗ ಎ ಸ್ಥಾನದಿಂದ ಜಿ.ಚಿದಾನಂದ ಸುವರ್ಣ ಗೆಣಸಿನಕುಮೇರು, ಹಿಂದುಳಿದ ವರ್ಗ ಬಿ ಸ್ಥಾನದಿಂದ ಜಗನ್ನಾಥ ರೈ ಚೆನ್ನಡ್ಕ, ಮಹಿಳಾ ಮೀಸಲು ಸ್ಥಾನದಿಂದ ನಯನಾ ರೈ ಮೇಗಿನಪಂಜ, ಗುಲಾಬಿ ಮೇಗಿನಪಂಜ, ಪ.ಪಂಗಡದಿಂದ ಶಾರದಾ ನಾಯ್ಕ ಕುಂಜೂರುಪಂಜ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ.ಜಾತಿ ಮೀಸಲು ಸ್ಥಾನದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇದ್ದು ಆ ಸ್ಥಾನ ಖಾಲಿಯಾಗಿರುತ್ತದೆ.
ಮಾ.11ರಂದು ಸಂಘದಲ್ಲಿ ನಡೆದ ನಿರ್ದೇಶಕ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚಿದಾನಂದ ಸುವರ್ಣರವರನ್ನು ನಯನಾ ರೈ ಸೂಚಿಸಿ, ಪುರುಷೋತ್ತಮ ನಾಯಕ್ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಗನ್ನಾಥ ರೈಯವರನ್ನು ಬಾಲಕೃಷ್ಣ ಪೂಜಾರಿ ಸೂಚಿಸಿ, ಗುಲಾಬಿ ಅನುಮೋದಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಸಂಧ್ಯಾ ಹಾಗೂ ಹಾಲು ಪರೀಕ್ಷಕಿ ಗೀತಾ ಸಹಕರಿಸಿದರು.