ಪುತ್ತೂರು: ಡಿಪಾರ್ಟ್ಮೆಂಟ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇವರ ಇನ್ಸ್ಪೈರ್ ಅವಾರ್ಡ್ ಮಾನಕ್ 2024-25ಕ್ಕೆ ಪುತ್ತೂರು ಸುದಾನ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸೃಷ್ಟಿ ಎಂ .ವಿ ( ರಂಜಿತ ಹಾಗೂ ವಿಜಯಕುಮಾರ್ ರವರ ಪುತ್ರಿ) ಅವರು ತಯಾರಿಸಿದ ಮಾದರಿ ಸ್ಮಾರ್ಟ್ ಎಲ್. ಪಿ .ಜಿ ಗ್ಯಾಸ್ ಸ್ಟವ್ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ಇವರಿಗೆ ವಿಜ್ಞಾನ ಶಿಕ್ಷಕಿಯರಾದ ಶ್ಯಾಮಲಾ ಬಂಗೇರ ಹಾಗೂ ರಂಜಿತ ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯನಿ ಶಿಕ್ಷಕ ವಂದ ಹಾಗೂ ಆಡಳಿತ ಮಂಡಳಿಯವರು ಆಯ್ಕೆಯಾದ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಇನ್ಸ್ಪೈರ್ ಅವಾರ್ಡ್ : ಸುದಾನ ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ಎಂ .ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ