ಮಹಿಳೆ ತನ್ನ ರಕ್ಷಣೆಯ ಜೊತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು: ಉಷಾ ವಿಷ್ಣು ಭಟ್
ಪುತ್ತೂರು: ಶ್ರೀ ಸರಸ್ವತಿ ಮಹಿಳಾ ಮಂಡಳಿ ವಿನಾಯಕ ನಗರ ದರ್ಬೆ ಇದರ ಆಶ್ರಯದಲ್ಲಿ ವಿಶ್ವ ಮಹಿಳೆ ದಿನಾಚರಣೆಯು ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು .
ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಜಯಂತಿ ನಾರಾಯಣ ನಾಯಕ್ ಪುಂಡಿಕಾಯಿ ಅಧ್ಯಕ್ಷತೆ ವಹಿಸಿದ್ದರೆ, ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕಿ ಉಷಾ ವಿಷ್ಣುಭಟ್ ಕೋಡಿಂಬಾಡಿ ಯವರು “ಮಹಿಳೆ ಇಂದು ಮತ್ತು ಮುಂದೆ ” ವಿಷಯದ ಕುರಿತು ಮಾತನಾಡುತ್ತಾ ಮಹಿಳೆಯರು ಸ್ವಯಂ ರಕ್ಷಣೆಯ ಜೊತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಇನ್ನೋರ್ವ ಅತಿಥಿಯಾಗಿದ್ದ ಕಬಕ ಸ.ಪ.ಪೂ ಕಾಲೇಜಿನ ಶಿಕ್ಷಕಿ ಯಶೋಧ ರವರು “ಮಹಿಳೆ ಹಿಂದೆ ಮತ್ತು ಇಂದು” ಎಂಬ ವಿಷಯದಲ್ಲಿ ಮಾತನಾಡುತ್ತಾ ಹಿಂದೆ ಎಲ್ಲೆಡೆ ಬಂಧನಕ್ಕೊಳಗಾಗಿದ್ದ ಮಹಿಳೆ ಇಂದು ಬಂಧನವನ್ನೆಲ್ಲ ಕಿತ್ತೆಸೆದು ಸಮಾಜದ ಎಲ್ಲಾ ರಂಗಗಳಲ್ಲೂ ತನ್ನ ಸಾಧನೆ ಮಾಡಿದ್ದಾಳೆ ಎಂದರು. ವೇದಿಕೆಯಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ಆಜೇರು ಉಪಸ್ಥಿತರಿದ್ದರು. ಸಿಂಧೂ ನಾರಾಯಣ ನಾಯಕ್ ಸ್ವಾಗತಿಸಿ, ವನಿತಾ ಜನಾರ್ಧನ ನಾಯಕ್ ಮರಿಕೆ ವಂದಿಸಿದರು. ಕು.ಮಲ್ಲಿಕಾ ಕುಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ರಂಜಿತಾ ಪ್ರಭು, ಕಾರ್ಯದರ್ಶಿ ರೇಖಾ ಪ್ರಭು ಸಂಪ್ಯ, ಸಂಘದ ನಿರ್ದೇಶಕಿ ದೇವಕಿ ಹರೀಶ್ ವಾಗ್ಲೆ ಸಹಕರಿಸಿದರು.
ಸನ್ಮಾನ: ಫಾರ್ಮಾ ಡಿ’ ಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ನೆಲ್ಯಾರ್ಣೆಯ ಕು.ಸಂಗೀತ ಇವರನ್ನು ಸನ್ಮಾನಿಸಲಾಯಿತು.