ಪುತ್ತೂರು:ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಮದ್ರಸ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.
ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್,ಧರ್ಮಗುರು ಬುರೂಜ್ ಶಾಲಾ ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ , ಬಸ್ತಿಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಹಮ್ದಾನಿ, ಪರಾರಿ ಜುಮಾ ಮಸೀದಿ ಖತೀಬರಾದ ಹಝ್ರತ್ ಅಯಾನ್ ರಝಾ, ಯು.ಎ. ಅಬ್ದುಲ್ ಹಮೀದ್ ಅಲ್ ಪುರ್ಖಾನಿ, ಖಮರುಲ್ ಇಸ್ಲಾಮ್ ರಝಾನಗರ ಖತೀಬರಾದ ಹಝ್ರತ್ ಸಮಿಯುಲ್ಲಾ ಖಾದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮತ್ತು ಅವರ ದೀನೀ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ನೀಡಲಾಯಿತು.ಪ್ರಾರ್ಥನೆಯೊಂದಿಗೆ ಆರಂಭವಾಗಿ ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.