ಪುತ್ತೂರು: ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಈಶ್ವರಮಂಗಲ ಇದರ ವತಿಯಿಂದ ಬೆಳ್ಳಿಚಡವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಪ್ರತಿಷ್ಠಾನದ ಸಂಚಾಲಕರಾದ ಹಿರಿಯಾಣ ಪ್ರಭಾಕರ ಆಚಾರ್ಯ ಅವರ ನೇತೃತ್ವದಲ್ಲಿ, ಭಾಗವತರಾದ ಮೆಣಸಿನಕಾನ ಮೋಹನ ಪಾಟಾಳಿ ಇವರಿಂದ ಪ್ರತಿ ಆದಿತ್ಯವಾರ ಬೆಳಗ್ಗೆ 9.30 ರಿಂದ ನಡೆಯುವ ಯಕ್ಷಗಾನ ಭಾಗವತಿಕೆ ತರಗತಿ ಮಾ.16ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದು 9741968972, 7760372800, 7760860963. ಮುಂದಿನ ದಿನದಲ್ಲಿ ಅತೀ ಶೀಘ್ರದಲ್ಲಿ ಚಂಡೆ ಮದ್ದಳೆ ಹಾಗೂ ನಾಟ್ಯ ತರಬೇತಿ ತರಗತಿಯು ಕೂಡಾ ನಡೆಯಲಿರುವುದು.