ಜಾತ್ರೆಗೆ ಹೆಚ್ಚುವರಿ ಬಸ್‌ಗಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಮನವಿ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ನೂತನ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಅವರಿಗೆ ದೇವಳದ ವತಿಯಿಂದ ಗೌರವ ಪ್ರಸಾದ ವಿತರಿಸಲಾಯಿತು.
ಮೂಲತಃ ಪುತ್ತೂರು ನರಿಮೊಗರಿನವರಾಗಿರುವ ಸುಬ್ರಹ್ಮಣ್ಯ ಪ್ರಕಾಶ್ ಅವರು ಮಾ.17ರಂದು ಅವರು ದೇವಳಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ವತಿಯಿಂದ ಶಲ್ಯ ತೊಡಿಸಿ ಗೌರವಿಸಿದರು. ಅರ್ಚಕ ವೇ.ಮೂ.ಹರೀಶ್ ಭಟ್ ಪ್ರಾರ್ಥನೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಈಶ್ವರ ಬೇಡೆಕರ್, ದಿನೇಶ್ ಪಿ.ವಿ, ಕೃಷ್ಣವೇಣಿ ಮತ್ತು ಪಿ.ಜಿ.ಚಂದ್ರಶೇಖರ್ ರಾವ್ ಅವರು ಉಪಸ್ಥಿತರಿದ್ದರು.