ಸುಳ್ಯಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಅಭಿವೃದ್ಧಿಯ ಹೊಸ ಶಕೆ ಆರಂಭಕ್ಕೆ ನಾಂದಿ : ಭರತ್ ಮುಂಡೋಡಿ
ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಆದೇಶದಂತೆ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಅವರು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾ.17ರಂದು ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ವಹಿಸಿ ಮಾತನಾಡಿ, ಸುಳ್ಯ ದಲ್ಲಿ ಅಭಿವೃದ್ಧಿಯ ಹೊಸಪರ್ವ ಆರಂಭದ ಶುಭ ಸೂಚನೆ ಪ್ರತ್ಯೇಕ ಪ್ರಾಧಿಕಾರ ರಚನೆಯ ಮೂಲಕ ಹೊಸ ಇತಿಹಾಸ ಸೃಷ್ಠಿಯಾಗಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾಜಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ವೆಂಕಪ್ಪಗೌಡ, ಎನ್. ಎ. ರಾಮಚಂದ್ರ, ಎಸ್. ಸಂಶುದ್ದೀನ್, ವಿನಯಕುಮಾರ್ ಕಂಡಡ್ಕ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಮೀದ್ ಕುತ್ತಾಮೊಟ್ಟೆ, ದ. ಕ. ಜಿಲ್ಲೆ ನಗರ ಮತ್ತು ಗ್ರಾಮಾoತರ ಯೋಜನಾ ಸಹಾಯಕ ನಿರ್ದೇಶಕ ಪ್ರವೀಣ್, ಟೌನ್ ಪ್ಲಾನರ್ ಮಹಮ್ಮದ್ ಫೈರೋಜ್, ರಾಜ್ಯ ಸಹಕಾರಿ ಮಹಾಮಂಡಲ ನಿರ್ದೇಶಕ ಚಂದ್ರಕೊಲ್ಚಾರ್, ನಗರಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋಕುಲ್ ದಾಸ್, ಸರೋಜಿನಿ ಪೆಲ್ತಡ್ಕ, ದ. ಕ. ಗೌಡ ಯುವ ಸೇವಾ ಸಂಘ ದ ಅಧ್ಯಕ್ಷ ಪಿ. ಎಸ್. ಗಂಗಾಧರ್,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾ ಕೃಷ್ಣ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು. ಶಶಿಧರ್ ಮಾಸ್ಟರ್ ಸ್ವಾಗತಿಸಿ, ವಂದಿಸಿದರು.