ಮಾರ್ಚ್ 19ರಂದು ಇಚಿಲಂಪಾಡಿ – ಪೆರಿಯಶಾಂತಿ ರಸ್ತೆ ದುರಸ್ತಿ ನಿಮಿತ್ತ ವಾಹನ ಸಂಚಾರ ನಿರ್ಬಂಧ: ಸಂಚಾರಕ್ಕೆ ಪರ್ಯಾಯ ಮಾರ್ಗ

0

ಪುತ್ತೂರು: ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಮತ್ತು ಪೆರಿಯಶಾಂತಿ ನಡುವಿನ ರಸ್ತೆಯಲ್ಲಿ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಮಾ.19 ರಂದು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ರಸ್ತೆ ನಿರ್ಬಂಧದಿಂದಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಹೋಗುವ ವಾಹನಗಳು – ಕೈಕಂಬ – ಗುಂಡ್ಯ – ಪೆರಿಯಶಾಂತಿ ಮಾರ್ಗವನ್ನು ಬಳಸಬಹುದು. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ವಾಹನಗಳು – ಉದನೆ – ಗುಂಡ್ಯ – ಕೈಕಂಬ ಮಾರ್ಗವಾಗಿ ಸಂಚರಿಸಬಹುದು ಎಂದು ಲೋಕೋಪಯೋಗಿ ಇಲಾಖೆ ಸಾರ್ವಜನಿಕರನ್ನು ಈ ಕಾಮಗಾರಿಗೆ ಸಹಕರಿಸುವಂತೆ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದೆ.

LEAVE A REPLY

Please enter your comment!
Please enter your name here