ಜನಪ್ರಿಯ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್ ರವರಿಗೆ “ಬೆಸ್ಟ್ ಪ್ರಿನ್ಸಿಪಾಲ್” ಪ್ರಶಸ್ತಿ

0

ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಅವರಿಗೆ ಐಟಿ ಒಲಿಂಪಿಯಾಡ್ ಎಜುಕೇಶನ್ ಪ್ರೈ. ಲಿ. ವತಿಯಿಂದ “ಬೆಸ್ಟ್ ಪ್ರಿನ್ಸಿಪಾಲ್” ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬೈನ ರಿಚ್ಮೋಂಟ್ ಕ್ಲಿಫ್ , ಹರಿನಂದಿನಿ ಗಾರ್ಡನ್ ನಲ್ಲಿ ನೆರವೇರಿತು.

ಪ್ರಶಸ್ತಿಯನ್ನು ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಪೂರ್ವ ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಡಾ. ಕಿರಣ್ ಬೇಡಿ ಮತ್ತು ಒಲಿಂಪಿಕ್ ಪದಕ ವಿಜೇತೆ ಹಾಗೂ ಪದ್ಮಭೂಷಣ ಪುರಸ್ಕೃತೆ ಸೈನಾ ನೆಹ್ವಾಲ್ ನೀಡಿದರು. ಲಿಬಿನ್ ಕ್ಸೇವಿಯರ್ ಅವರ ಅದ್ಭುತ ನಾಯಕತ್ವ, ಶೈಕ್ಷಣಿಕ ಶ್ರೇಷ್ಠತೆಗೆ ಸಲ್ಲಿಸಿದ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿ‌ ಸಿಕ್ಕಿರುವುದು ಸಂತಸ ತಂದಿದೆ
ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ಪ್ರಶಸ್ತಿಯನ್ನು ಜನಪ್ರಿಯ ಸೆಂಟ್ರಲ್ ಶಾಲೆಯ ಸಮಸ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಅರ್ಪಿಸುತ್ತಿದ್ದೇನೆ. ಅವರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಈ ಸಾಧನೆಯ ಹಿಂದಿನ ಪ್ರೇರಣೆ.
ಲಿಬಿನ್ ಕ್ಸೇವಿಯರ್
ಪ್ರಾಂಶುಪಾಲರು
ಜನಪ್ರಿಯ ಸೆಂಟ್ರಲ್ ಸ್ಕೂಲ್

LEAVE A REPLY

Please enter your comment!
Please enter your name here