ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸಂತ ಜೋಸೆಫ್ ದಿನಾಚರಣೆ ಹಾಗೂ ವಯಸ್ಕರ ಸಮ್ಮಿಲನ ವಿಜೃಂಭಣೆಯಿಂದ ನೆರವೇರಿತು. ಈ ಮಹತ್ವದ ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಮತ್ತು ಆರ್ಲ ಸೆಂಟ್ ಮೇರಿಸ್ ಚರ್ಚ್ ಸದಸ್ಯರು ಭಾಗವಹಿಸಿದರು. ಒಟ್ಟು 70 ಮಂದಿ ಈ ಕಾರ್ಯಕ್ರಮಕ್ಕೆ ಹಾಜರಿದ್ದು, ಅವರಿಗೆ ಸನ್ಮಾನ ಹಾಗೂ ಸ್ನೇಹ ಔತಣದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಆಯೋಜಕರಾಗಿ ಮಾತೃ ವೇದಿಕೆ, ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಎಸ್.ಎಂ.ವೈ.ಎಂ. ಯುವಜನರು ಹಾಗೂ ಚರ್ಚ್ ನ ಟ್ರಸ್ಟಿಗಳು ಸಕ್ರಿಯವಾಗಿ ಪಾಲ್ಗೊಂಡರು.
ಸಮಾರಂಭದ ಆರಂಭದಲ್ಲಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಸಂತ ಜೋಸೆಫ್ ಜೀವನದ ಮಹತ್ವ, ಅವರ ತ್ಯಾಗ ಹಾಗೂ ಸೇವೆಯ ಕುರಿತು ವಿಶ್ಲೇಷಣಾತ್ಮಕ ಪ್ರವಚನ ನೀಡಲಾಯಿತು. ಹಿರಿಯ ನಾಗರಿಕರನ್ನು ಗೌರವಿಸುವ ಉದ್ದೇಶದಿಂದ ಸನ್ಮಾನ ಸಮಾರಂಭ ಆಯೋಜಿಸಲಾಯಿತು.
ಕಾರ್ಯಕ್ರಮದ ಅಂತ್ಯಕ್ಕೆ ಎಲ್ಲ ಸದಸ್ಯರು ಸ್ನೇಹ ಔತಣ ಸೇವಿಸಿ ಪರಸ್ಪರ ಅನುಭವ ಹಂಚಿಕೊಂಡರು. ವಯಸ್ಕರ ಸಮಾವೇಶವು ಸದಭಿಪ್ರಾಯ ವಿನಿಮಯ ಮತ್ತು ಹಿರಿಯ ನಾಗರಿಕ ರ ಬಗ್ಗೆ ಇರ ಬೇಕಾದ ಕಾಳಜಿಯ ಬಗ್ಗೆ ಬೆಳಕು ಚೆಲ್ಲುವಂತಿತ್ತು.
ಇಂತಹ ಸಾಮಾಜಿಕ ಕಾರ್ಯಕ್ರಮಗಳು ಭವಿಷ್ಯದಲ್ಲೂ ಮುಂದುವರಿಯಲಿ ಎಂದು ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಶುಭ ಹಾರೈಸಿದರು.