ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ ಶ್ರೀ ದೇವಿಯ ಪೇಟೆ ಸವಾರಿ

0

ನಾಳೆ ದರ್ಶನ ಬಲಿ, ಮಾ.22: ಮಹಾರಥೋತ್ಸವ

ಆಲಂಕಾರು:ಸೀಮಾ ದೇವಸ್ಥಾನ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮಾ.14 ರಿಂದ ಆರಂಭಗೊಂಡಿದ್ದು, ಮಾ.24 ರ ವರೆಗೆ ನಡೆಯಲಿದೆ.

ಮಾ. 19ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 4.30ರಿಂದ ಬಲಿ ಹೊರಟು ಉತ್ಸವ, ಆಲಂಕಾರು ಪೇಟೆ ಸವಾರಿ, ಆಲಂಕಾರು ಸಾರ್ವಜನಿಕ ಕಟ್ಟೆಪೂಜೆಗಳು, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7ರಿಂದ ಆಲಂಕಾರು ಪೇಟೆಯಲ್ಲಿ ಪುತ್ತೂರು ಬಲ್ನಾಡು ಸಂಸಾರ ಕಲಾವಿದೆರ್ ಇವರಿಂದ ನಂಬಿಕೆದಾಯೆ ಭಕ್ತಿಪ್ರಧಾನ ಹಾಸ್ಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ದೇವರ ಸವಾರಿ ಉತ್ಸವದ ಜೊತೆಯಲ್ಲಿ ಶ್ರೀ ದುರ್ಗಾಂಬಾ ಅಲಂಕಾರ ಸಮಿತಿ ಹಾಗೂ ಶ್ರೀ ಕ್ಷೇತ್ರ ಶರವೂರು ಇವರ ಸಂಯೋಜನೆಯಲ್ಲಿ ಚಲನಚಿತ್ರ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಆರ್ಟ್ಸ್ ಬಳಗದ ಗಿರಿಧರ ಶೆಟ್ಟಿ ಬೆಳ್ತಂಗಡಿ ಇವರಿಂದ ಕೀಲು ಕುದುರೆ, ಅರಸು ನಾಟ್ಯ ಹಾಗೂ ಯಕ್ಷಗಾನ ಶೈಲಿಯ ಗಜಗಾತ್ರದ ಆಕರ್ಷಕ ಗೊಂಬೆಗಳ ಪ್ರದರ್ಶನ ನಡೆಯಿತು.

ಮಾ. 20ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12ರಿಂದ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 6.30ರಿಂದ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಿತು.

ಮಾ. 21ರಂದು ಬೆಳಿಗ್ಗೆ 8.30ಕ್ಕೆ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಸವಾರಿ ಮಂಟಪ ಕಟ್ಟೆಪೂಜೆಗಳು, ಕೆರೆ ಉತ್ಸವ, ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಜರಗಲಿದೆ.

ಮಾ. 22ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಆಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ ಹಾಗೂ ರಾತ್ರಿ 9ರಿಂದ ಶ್ರೀ ಮಹಾರಥೋತ್ಸವ, ಉತ್ಸವ, ವಸಂತಕಟ್ಟೆಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಲಿದೆ.

ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 10ರಿಂದ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಮಂಗಳೂರು ಶ್ರೀ ಲಲಿತೆ ಕಲಾವಿದರ್ ಇವರಿಂದ ಶನಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here