ಪುತ್ತೂರು: ಬಟ್ಟೆಗಳ ಡ್ರೈಕ್ಲೀನಿಂಗ್ನಲ್ಲಿ ಕಳೆದ 50 ವರ್ಷಗಳಿಂದ ಮನೆ ಮಾತಾಗಿರುವ ದೀಪಕ್ ಪವರ್ ಲಾಂಡ್ರಿಯವರನೂತನ ಸಂಸ್ಥೆ ದೀಪಕ್ ಲಾಂಡ್ರಿ ಡ್ರೈ ಕ್ಲೀನ್ ಮಾಸ್ಟರ್ ಮಾ.19ರಂದು ದರ್ಬೆ ವೃತ್ತದ ಬಳಿಯಿರುವ ಮಹಾಲಿಂಗೇಶ್ವರ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಶ್ರೀಕೃಷ್ಣ ಉಪಾಧ್ಯಾಯರವರ ವೈದಿಕ ವಿಧಿ ವಿಧಾನಗಳೊಂದಿಗೆ ಮಳಿಗೆಯು ಉದ್ಘಾಟನೆಗೊಂಡಿತು. ಸಂಸ್ಥೆಯ ಮಾಲಕರ ತಾಯಿ ಧನಲಕ್ಷ್ಮೀ ತಾರಾನಾಥರವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಗರ ಸಭಾ ಸದಸ್ಯ ಜೀವಂಧರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಸಂತೋಷ್, ಉದ್ಯಮಿಗಳಾದ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ಶಿವರಾಮ ಆಳ್ವ, ಉಮಾನಾಥ ಪಿ.ಬಿ., ಇಂದುಶೇಖರ್ ಪಿ.ಬಿ., ಹೇಮಂತ್ , ಸತೀಶ್ ನಾಕ್ ಪರ್ಲಡ್ಕ, ವಿಶ್ವನಾಥ ದರ್ಬೆ, ಪ್ರಭಾ ಹರೀಶ್ ಆಚಾರ್ಯ, ರಂಗನಾಥ ಕೆದಿಲಾಯ, ಅನಿತಾ ನವೀನ್ ರಾವ್, ದೀಪಕ್ ಪವರ್ ಲಾಂಡ್ರಿಯ ಪಿ. ಲಿಂಗಪ್ಪ, ಪಿ.ಬಿ ಸತೀಶ್, ನಿಶಿತ ಅಕ್ಷರ್ ತಾಯಿ ಶೋಭಾ ಕಾಸರಗೋಡು, ಸಹೋದರ ನಿತಿನ್ ಕಾಸರಗೋಡು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಮ್ಹಾಲಕ ಅಕ್ಷರ್ ಕಲ್ಲೇಗರವರ ಪತ್ನಿ ನಿಶಿತ ಅಕ್ಷರ್ ಸ್ವಾಗತಿಸಿ, ಮ್ಯಾನೇಜರ್ ಲಿಖಿತ್ ವಂದಿಸಿದರು.
ಸಂಸ್ಥೆಯ ಸ್ಥಾಪಕ ತಾರಾನಾಥ ಪುತ್ತೂರು ಸ್ವಾಗತಿಸಿ ನಮ್ಮಲ್ಲಿ ಎಲ್ಲಾ ತರದ ಬಟ್ಟೆಗಳನ್ನು ಉತ್ತಮವಾಗಿ ಡ್ರೈ ವಾಶ್ ಹಾಗೂ ಇಸ್ತ್ರೀಮಾಡಿ ಕೊಡಲಾಗುವುದು. ಜರತಾರಿ ಸೀರೆಗಳು, ಬೆಲೆ ಬಾಳುವ ಇನಿತರ ಉಡುಪುಗಳನ್ನು ನಿರೀಕ್ಷೆಗೂ ಮೀರಿ ಶುಭ್ರವಾಗಿ ಡ್ರೈವಾಶ್ ಮಾಡಲಾಗುವುದು. ಗ್ರಾಹಕರ ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ನೀಡಲು ಸದಾ ಸಿದ್ದರಾಗಿದ್ದೇವೆ ಎಂದರು.