ಎ.26: ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಚುನಾವಣೆ

0

ಎ.13: ನಾಮಪತ್ರ ಸಲ್ಲಿಕೆ ಆರಂಭ
ಎ.19: ನಾಮಪತ್ರ ಹಿಂತೆಗೆಯಲು ಅಂತಿಮ ದಿನ

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಎ.26ರಂದು ಪೂರ್ವಾಹ್ನ 9ರಿಂದ ಅಪರಾಹ್ನ 4ರವರೆಗೆ ಒಕ್ಕೂಟದ ಕಛೇರಿಯ ಆವರಣದಲ್ಲಿ ನಡೆಯಲಿದೆ

ಎ.13ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿದ್ದು ಎ.19ರಂದು ಮಧ್ಯಾಹ್ನ 3.00ರವರೆಗೆ ನಾಮಪತ್ರ ಹಿಂತೆಗೆಯಲು ಅಂತಿಮ ದಿನವಾಗಿರುತ್ತದೆ. ಬಳಿಕ ಚುನಾವಣೆ ಸಂಬಂಧಿತ ಪ್ರಕ್ರಿಯೆಗಳು ನಡೆದು ಎ.26ರಂದು ಚುನಾವಣೆ ನಡೆಯಲ್ಲಿದೆ. ಅದೇ ದಿನದಂದು ಮತಗಳ ಎಣಿಕೆ ಕಾರ್ಯ ನಡೆದು ಚುನಾವಣಾಧಿಕಾರಿಯವರು ಚುನಾವಣಾ ಫಲಿತಾಂಶ ಘೋಷಣೆ ಮಾಡಲಿದ್ದಾರೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here