





ಪುತ್ತೂರು: ನೆಹರುನಗರದ ಕಲ್ಲೇಗ ಗೌಡ ತರವಾಡು ಮನೆಯ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳಾದ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಹಾಗು ಗುಳಿಗ ದೈವಗಳ ನೇಮೋತ್ಸವವರು ಮಾ.23 ಮತ್ತು 24ರಂದು ನಡೆಯಲಿದೆ.
ಕಲ್ಲೇಗ ಗೌಡ ತರವಾಡು ಮನೆಯಲ್ಲಿ ಪ್ರಧಾನ ಅರ್ಚಕ ಶೇವಿರೆ ಕೃಷ್ಣ ಮಡಪುಳಿತ್ತಾಯ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಮುಡಿಪು ಶುದ್ದ, ಧರ್ಮದೈವಗಳ ಭಂಡಾರದ ಕಲಶಾಭಿಷೇಕ, ದೈವಗಳಿಗೆ ತಂಬಿಲ, ಶ್ರೀ ಸತ್ಯನಾರಾಯಣ ದೇವರ ಪೂಜೆ ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಅನ್ನಸಂತರ್ಪಣೆ ನಡೆದ ಬಳಿಕ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮ ನಡೆಯಲಿದೆ. ಮಾ.24ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿಯ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಲ್ಲೇಗ ಗೌಡ ತರವಾಡು ಮನೆಯ ಮುಖ್ಯಸ್ಥ ಕಲ್ಲೇಗ ಜಿನ್ನಪ್ಪ ಗೌಡ ತಿಳಿಸಿದ್ದಾರೆ.










